Friday, May 3, 2024
HomeWorldಕೊರೋನಾ ವ್ಯಾಕ್ಸೀನ್ ನ ಮೂರನೇ ಡೋಸ್ ಯಾರಿಗೆ ಅಗತ್ಯ ಗೊತ್ತಾ...? ಇಲ್ಲಿದೆ ಓದಿ

ಕೊರೋನಾ ವ್ಯಾಕ್ಸೀನ್ ನ ಮೂರನೇ ಡೋಸ್ ಯಾರಿಗೆ ಅಗತ್ಯ ಗೊತ್ತಾ…? ಇಲ್ಲಿದೆ ಓದಿ

spot_img
- Advertisement -
- Advertisement -

ಕೊರೋನಾ ಲಸಿಕೆ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಭಾರತದಲ್ಲೂ ಕೊರೋನಾದ ಎರಡು ಡೋಸ್ ಲಸಿಕೆ ನೀಡಲಾಗ್ತಿದೆ. ಮೂರನೇ ಡೋಸ್ ಬಗ್ಗೆಯೂ ಸದ್ಯ ಚರ್ಚೆಯಾಗ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಶಾಖೆಯ ಮುಖ್ಯಸ್ಥರು ಮೊದಲ ಬಾರಿಗೆ ಮೂರನೇ ಡೋಸ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಲಸಿಕೆಯ ಮೂರನೇ ಡೋಸ್ ಕೊರೋನಾದಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಸೋಂಕಿನ ಹೆಚ್ಚಿನ ಹರಡುವಿಕೆಯು ತುಂಬಾ ಚಿಂತಾಜನಕವಾಗಿದೆ ಎಂದವರು ಹೇಳಿದ್ದಾರೆ. ಯುಎಸ್ ಸರ್ಕಾರದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಅವರೊಂದಿಗೆ ಮಾತನಾಡಿದ ಅವರು, ಲಸಿಕೆಯ ಮೂರನೇ ಡೋಸ್ ಪಡೆಯುವುದು ಐಷಾರಾಮಿ ಅಲ್ಲ ಎಂದಿದ್ದಾರೆ.

ಮೂರನೇ ಡೋಸ್, ಅತ್ಯಂತ ದುರ್ಬಲ ಜನರನ್ನು ಸುರಕ್ಷಿತಗೊಳಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಶಾಖೆಯ ಮುಖ್ಯಸ್ಥ ಕ್ಲುಗೆ ಹೇಳಿದ್ದಾರೆ. ಹೆಚ್ಚು ಲಸಿಕೆಗಳನ್ನು ಹೊಂದಿರುವ ಶ್ರೀಮಂತ ದೇಶಗಳು, ಲಸಿಕೆಗಳ ಕೊರತೆಯಿರುವ ದೇಶಗಳೊಂದಿಗೆ ಹಂಚಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.

ಅನೇಕ ದಿನಗಳಿಂದ ಮೂರನೇ ಡೋಸ್ ಬಗ್ಗೆ ಚರ್ಚೆಯಾಗ್ತಿದೆ. ಎರಡು ಡೋಸ್ ಪಡೆದ ನಂತ್ರವೂ ಮೂರನೇ ಡೋಸ್ ಪಡೆಯಬೇಕಾ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಡಬ್ಲ್ಯುಎಚ್ ಒ ಹೇಳಿಕೆ, ಎಲ್ಲರ ಅನುಮಾನಕ್ಕೆ ಕಾರಣವಾಗಲಿದೆ.

- Advertisement -
spot_img

Latest News

error: Content is protected !!