Saturday, June 6, 2026
HomeWorldರಷ್ಯಾಗೆ ಭಾರತದ ರಾಯಭಾರಿಯಾಗಿ ವಿನಯ್ ಕುಮಾರ್ ನೇಮಕ

ರಷ್ಯಾಗೆ ಭಾರತದ ರಾಯಭಾರಿಯಾಗಿ ವಿನಯ್ ಕುಮಾರ್ ನೇಮಕ

- Advertisement -
- Advertisement -

ರಷ್ಯಾಗೆ ಭಾರತದ ರಾಯಭಾರಿಯಾಗಿ ವಿನಯ್‌ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರದಂದು ಪ್ರಕಟಣೆ ಹೊರಡಿಸಿದೆ.

ಪ್ರಸ್ತುತ ಮ್ಯಾನ್ಮಾರ್‌ನಲ್ಲಿ ಭಾರತದ ರಾಯಭಾರಿಯಾಗಿ ವಿನಯ್‌ ಕುಮಾರ್‌ ಅವರು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲಿಯೇ ರಷ್ಯಾದ ಭಾರತ ರಾಯಭಾರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಈ ಹಿಂದೆ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಪವನ್‌ ಕಪೂರ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಭಾರತೀಯ ವಿದೇಶಾಂಗ ಸೇವೆಯ 1992 ರ ಬ್ಯಾಚ್‌ನ ಅಧಿಕಾರಿಯಾಗಿರುವ ವಿನಯ್‌ ಕುಮಾರ್, 2021ರ ಅಂತ್ಯದಿಂದ ಮ್ಯಾನ್ಮಾರ್‌ಗೆ ರಾಯಭಾರಿಯಾಗಿದ್ದರು.

- Advertisement -

Latest News

error: Content is protected !!