Saturday, May 11, 2024
Homeತಾಜಾ ಸುದ್ದಿಆರಗ ಜ್ಞಾನೇಂದ್ರ ಖಾತೆ ಬದಲಿಸುವಂತೆ ಬಿಜೆಪಿಯಲ್ಲಿ ಚರ್ಚೆ! ಮತ್ತೆ ಆರ್‌.ಅಶೋಕ್‌ ಪಾಲಾಗುತ್ತಾ ಗೃಹಖಾತೆ?

ಆರಗ ಜ್ಞಾನೇಂದ್ರ ಖಾತೆ ಬದಲಿಸುವಂತೆ ಬಿಜೆಪಿಯಲ್ಲಿ ಚರ್ಚೆ! ಮತ್ತೆ ಆರ್‌.ಅಶೋಕ್‌ ಪಾಲಾಗುತ್ತಾ ಗೃಹಖಾತೆ?

spot_img
- Advertisement -
- Advertisement -

ಬೆಂಗಳೂರು: ಸಂಪುಟ ಪುನರ್‌ರಚನೆ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಖಾತೆ ಬದಲಿಸಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಬೆನ್ನಿಗೇ ಹಿರಿಯ ಸಚಿವ ಆರ್‌.ಅಶೋಕ್‌ ಅವರಿಗೆ ಗೃಹಖಾತೆ ನೀಡುವುದು ಸೂಕ್ತ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಶುರುವಾಗಿದೆ.



ಆರಗ ಜ್ಞಾನೇಂದ್ರ ಕೂಡ ಬಿಜೆಪಿಯಲ್ಲಿ ಹಿರಿಯರು. ಆದರೆ, ಮೊದಲ ಬಾರಿಗೆ ಸಚಿವರಾಗಿರುವ ಅವರಿಗೆ ಅತ್ಯಂತ ಮಹತ್ವದ ಖಾತೆ ವಹಿಸಲಾಗಿದೆ. ಗೃಹ ಸಚಿವರಾದವರು ಖಡಕ್‌ ಹಾಗೂ ಸೂಕ್ಷ್ಮ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ ಜಾಣ್ಮೆ ಹೊಂದಿರಬೇಕಾಗುತ್ತದೆ. ಜ್ಞಾನೇಂದ್ರ ಮೃದು ಸ್ವಭಾವದವರು. ಜೊತೆಗೆ ಅನುಭವದ ಕೊರತೆಯೂ ಇದೆ ಎಂಬ ಅಭಿಪ್ರಾಯವಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆರಗ ಗೃಹ ಸಚಿವರಾದ ಬಳಿಕ ಹೇಳಿಕೆಗಳಿಂದಲೇ ಸಾರ್ವಜನಿಕ ಮತ್ತು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದು ಸರ್ಕಾರಕ್ಕೂ ಮುಜುಗರ ತರುತ್ತಿದೆ. ಹಾಗಾಗಿ ಜ್ಞಾನೇಂದ್ರ ಅವರಿಗೆ ಗೃಹ ಇಲಾಖೆ ನೀಡುವಂತೆ ಈ ಹಿಂದೆ ಸಲಹೆ ಕೊಟ್ಟಿದ್ದ ಸಂಘ ಪರಿವಾರವೇ ಈಗ ಬೇರೆಯವರಿಗೆ ನೀಡಲು ಸೂಚಿಸುತ್ತಿದೆ ಎನ್ನಲಾಗಿದೆ.

ಬೊಮ್ಮಾಯಿ ಸಂಪುಟದಲ್ಲಿ ಆರ್ ಅಶೋಕ್‌ ಅವರಿಗೆ ಗೃಹ ಖಾತೆ ನೀಡುವ ಚಿಂತನೆಯಿತ್ತು. ಆದರೆ, ಮನಸು ಮಾಡದ ಕಾರಣ ಕಂದಾಯ ನೀಡಲಾಗಿತ್ತು. ಈ ಇಲಾಖೆಯಲ್ಲಿ ಹಲವು ಜನಸ್ನೇಹಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಮತ್ತೊಂದೆಡೆ ಸಂಘ ಪರಿವಾರದ ಮೂಲದಿಂದ ಬಂದು ಮೊದಲ ಬಾರಿ ಸಚಿವರಾದವರಿಗೆ ಮಹತ್ವದ ಖಾತೆಯನ್ನೇ ನೀಡಬೇಕು ಎಂಬ ಒತ್ತಡದಂತೆ ಆರಗ ಜ್ಞಾನೇಂದ್ರ, ಸುನೀಲ್‌ ಕುಮಾರ್‌ ಇತರರಿಗೆ ಪ್ರಮುಖ ಖಾತೆ ನೀಡಲಾಗಿತ್ತು. ಈಗಿನ ಪರಿಸ್ಥಿತಿ ಭಿನ್ನವಾದುದು. ಚುನಾವಣೆ ವರ್ಷದಲ್ಲಿ ಕಾನೂನು ಸುವ್ಯವಸ್ಥೆ ಕೆಡಿಸುವ ಅನೇಕ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಅನುಭವಿ ಸಚಿವರ ಅಗತ್ಯವಿದೆ ಎಂಬ ಅಭಿಪ್ರಾಯವಿದೆ. ಹಾಗಾಗಿ ಅಶೋಕ್‌ ಅವರು ಗೃಹ ಖಾತೆಗೆ ಮರಳುವ ಎಲ್ಲ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

- Advertisement -
spot_img

Latest News

error: Content is protected !!