Friday, June 5, 2026
Homeತಾಜಾ ಸುದ್ದಿಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ ಕಳವು- ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ ಕಳವು- ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನವೊಂದು ಕಳವಾದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಾಪೀಡೆ ಹೊಟೇಲ್ ಬಳಿ ನಡೆದಿದೆ. ಕಾಯರ್ದಡ್ಕ, ಕಳಂಜ ಗ್ರಾಮದ ಚಂದ್ರಶೇಖರ ಅವರಿಗೆ ಸೇರಿದ ವಾಹನ ಎಂದು ತಿಳಿಸಲಾಗಿದೆ.

ಚಂದ್ರಶೇಖರ ಅವರು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಾಪೀಡೆ ಹೊಟೇಲ್ ನ ಕಟ್ಟಡದ ಹಿಂಬದಿ ಯಲ್ಲಿ ಪಾರ್ಕ್ ಮಾಡಿ ಹೋಗಿದ್ದು, ವಾಪಾಸು ಬಂದು ನೋಡಿದಾಗ ಪಾರ್ಕ್ ಮಾಡಿದಲ್ಲಿ ಬೈಕ್ ಇಲ್ಲದೇ ಇದ್ದು, ಯಾರೋ ಕಳ್ಳರು ಬೈಕನ್ನು ಕಳವು ಮಾಡಿಕೊಂಡು ಹೋಗಿರುವುದು ತಿಳಿದು ಬಂದಿದೆ.

ಕಳವಾದ ಮೋಟಾರ್ ಸೈಕಲ್ ನ ಮೌಲ್ಯ ಸುಮಾರು ರೂ 10,000/- ಆಗಬಹುದು ಎಂದು ತಿಳಿಸಿದ್ದಾರೆ, ಇದುವರೆಗೆ ಮೋಟಾರ್ ಸೈಕಲ್ ನ್ನು ಎಲ್ಲಾ ಕಡೆ ಹುಡುಕಾಡಿ ಪತ್ತೆ ಯಾಗದೇ ಇರುವುದರಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!