Friday, June 5, 2026
Homeಚಿಕ್ಕಮಗಳೂರುಸಿಎಂ ಆದ ಬಳಿಕ ಮೊದಲ ಬಾರಿ ಶೃಂಗೇರಿಗೆ ಭೇಟಿದ ಬಸವರಾಜ್ ಬೊಮ್ಮಾಯಿ: ಮುಖ್ಯಮಂತ್ರಿಗಳಿಗೆ ಸಿಕ್ಕಿದ ಬ್ಯಾನರ್...

ಸಿಎಂ ಆದ ಬಳಿಕ ಮೊದಲ ಬಾರಿ ಶೃಂಗೇರಿಗೆ ಭೇಟಿದ ಬಸವರಾಜ್ ಬೊಮ್ಮಾಯಿ: ಮುಖ್ಯಮಂತ್ರಿಗಳಿಗೆ ಸಿಕ್ಕಿದ ಬ್ಯಾನರ್ ಸ್ವಾಗತ ಹೇಗಿತ್ತು ಗೊತ್ತಾ?

- Advertisement -
- Advertisement -

ಚಿಕ್ಕಮಗಳೂರು : ಸಿಎಂ ಆದ ಬಳಿಕ ಇಂದು ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೃಂಗೇರಿಗೆ ಭೇಟಿ ನೀಡಿದರು. ಈ ವೇಳೆ ಸಿಎಂಗೆ ಸ್ವಾಗತ ಕೋರಲು ಬ್ಯಾನರ್ ಹಾಕಲಾಗಿತ್ತು. ಆದರೆ ಬ್ಯಾನರ್ ಗಳು ಸಿಎಂ ಅವರನ್ನು ಅಣಕಿಸುವಂತಿತ್ತು.

ದಯವಿಟ್ಟು ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು ಎಂದು ಬರೆದು ಬ್ಯಾನರ್ ಹಾಕಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ 15 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಪದೇ ಪದೇ ಭರವಸೆ ನೀಡಿ ಸರ್ಕಾರ ಮಾತು ತಪ್ಪುತ್ತಲೇ ಬಂದಿದೆ.  ಸರ್ಕಾರ, ಜಿಲ್ಲಾಡಳಿತದ ಧೋರಣೆಯಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ. ಹಾಗಾಗಿ ಇಂದು ಶೃಂಗೇರಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ ವೇಳೆ ಈ ರೀತಿ ಅಣಕವಾಡುವಂತೆ ಬ್ಯಾನರ್ ಅಳವಡಿಸಿದ್ದಾರೆ.

- Advertisement -

Latest News

error: Content is protected !!