Wednesday, June 3, 2026
Homeತಾಜಾ ಸುದ್ದಿಪತಿಗೆ ವಿಚ್ಛೇದನ ನೀಡಿದ ಮಹಿಳೆಯೊಬ್ಬಳಿಗೆ ನೀಡಿದ ಶಿಕ್ಷೆ ಹೇಗಿದೆ ನೋಡಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ...

ಪತಿಗೆ ವಿಚ್ಛೇದನ ನೀಡಿದ ಮಹಿಳೆಯೊಬ್ಬಳಿಗೆ ನೀಡಿದ ಶಿಕ್ಷೆ ಹೇಗಿದೆ ನೋಡಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ವಿಡಿಯೋ…

- Advertisement -
- Advertisement -

ಮಧ್ಯಪ್ರದೇಶ : ಗಂಡನಿಗೆ ವಿಚ್ಛೇದನ ನೀಡಿದ ಮಹಿಳೆಯೊಬ್ಬಳಿಗೆ ಆಕೆಗೆ ಗಂಡನ ಕುಟುಂಬದ ಸದಸ್ಯನನ್ನು ಹೆಗಲ ಮೇಲೆ ಹೊತ್ತುಕೊಂಡು ಮೂರು ಕಿಲೋಮೀಟರ್ ನಡೆದುಕೊಂಡು ಹೋಗುನ ಅಮಾನವೀಯ ಶಿಕ್ಷೆ ನೀಡಿದ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೋಲುಗಳು ಮತ್ತು ಕ್ರಿಕೆಟ್ ಬ್ಯಾಟ್ ಗಳನ್ನು ಹಿಡಿದುಕೊಂಡು ಸುತ್ತುವರಿದಿರುವ ಹಳ್ಳಿಗರ ಜೊತೆಯಲ್ಲಿ ಮಹಿಳೆ ವ್ಯಕ್ತಿಯೊಬ್ಬನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಸಾಗುತ್ತಿರುವುದು ಕಂಡುಬರುತ್ತದೆ. ಕೆಲವರು ಅವಳಿಗಾಗುತ್ತಿರುವ ಅವಮಾನವನ್ನು ನೋಡಿ ನಗುವುದು ಮತ್ತು ಆನಂದಿಸುತ್ತಿರುತ್ತಾರೆ.

ಗುನಾ ಜಿಲ್ಲೆಯ ಸಗೈ ಮತ್ತು ಬಾನ್ಸ್ ಖೇಡಿ ಗ್ರಾಮಗಳ ನಡುವೆ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!