ದಿಯಾ’ ಸಿನಿಮಾದಲ್ಲಿ ಅಭಿನಯಿಸಿ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ ನಟಿ ಖುಷಿ ರವಿ. ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟ ಆಗಿದೆ. ನಾಯಕಿಯಾಗಿ ನಟಿಸಿದ ಮೊದಲ ಚಿತ್ರವೇ ಖುಷಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಅವರ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಅಭಿಮಾನಿಗಳ ಬಯಕೆ. ಅವರ ಮೂಲ ಹೆಸರು ಏನು? ಅವರ ಊರು ಯಾವುದು? ಮದುವೆ ಆಗಿದೆಯಾ? ಮಕ್ಕಳು ಎಷ್ಟು? ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಅವರು ಏನು ಮಾಡುತ್ತಿದ್ದರು? ಇಂಥ ಹಲವು ಪ್ರಶ್ನೆಗಳು ಸಿನಿಪ್ರಿಯರ ಮನದಲ್ಲಿ ಕೊರೆಯುತ್ತಿರುತ್ತದೆ. ಆ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.
ನಟಿ ಖುಷಿ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಜೆಪಿ ನಗರದಲ್ಲಿ ಮುಗಿಸಿದ ಇವರು ತಮ್ಮ ಪದವಿ ಶಿಕ್ಷಣವನ್ನು ಜಯನಗರದ NMKRV ಕಾಲೇಜಿನಲ್ಲಿ ಮುಗಿಸಿದರು. ಪದವಿ ವಿದ್ಯಾಭ್ಯಾಸ ಮಾಡಿದ್ದು SSMRV ಕಾಲೇಜಿನಲ್ಲಿ.
ಕಳೆದ 10 ವರ್ಷಗಳಿಂದ ರಂಗಭೂಮಿಯ ಒಡನಾಟದಲ್ಲಿರುವ ಖುಷಿ, ಹಲವು ನಾಟಕ ತಂಡಗಳ ಜೊತೆ ತೊಡಗಿಕೊಂಡಿದ್ದಾರೆ.
ಖುಷಿ ಅವರ ಮೂಲ ಹೆಸರು ಸುಷ್ಮಿತಾ!
ಹೌದು ಚಿತ್ರರಂಗಕ್ಕೆ ಬರುವ ಮೊದಲು ಖುಷಿಯ ಹೆಸರು ಸುಷ್ಮಿತಾ, ಆದರೆ ಸಿನಿಮಾ ರಂಗಕ್ಕೆ ಕಾಲಿಟ್ಟ ನಂತರ ತಾ,,ಆ ಹೆಸರನ್ನು ಖುಷಿ ಎಂದು ಹೆಸರು ಬದಲಿಸಿಕೊಂಡರು. ಆದರೆ ಆ ಖುಷಿ ಹೆಸರೇ ಇಂದು ತಮ್ಮನ್ನು ನಾಡಿನಾದ್ಯಂತ ಗುರುತಿಸುವಂತೆ ಮಾಡಿದೆ.
ಗಣರಾಜ್ಯೋತ್ಸವದ ಪರೇಡ್ ನಲ್ಲಿ ಖುಷಿ
2012ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಖುಷಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಸಂಗೀತ ಅಭ್ಯಾಸ ಮಾಡಿರುವ ಖುಷಿ
ನಾಲ್ಕು ವರ್ಷಗಳ ಕಾಲ ಬೆಂಗಳೂರಿನಲ್ಲಿ ಸಂಗೀತ ಕಲಿತಿರುವ ಸುಶ್ರಾವ್ಯವಾಗಿ ಹಾಡಬಲ್ಲರು. ಮುಂದೆ ಅವಕಾಶ ಸಿಕ್ಕರೆ ಸಿನೆಮಾಗಳಲ್ಲಿ ಹಾಡುವ ಆಸೆಯನ್ನು ಇಟ್ಟು ಕೊಂಡಿದ್ದಾರೆ ಈ ‘ದಿಯಾ’ ಚೆಲುವೆ’ .
ಇದು ಇವರ ಮೊದಲ ಸಿನೆಮಾವಲ್ಲ
ಹೌದು, ಖುಷಿ ಈ ಮೊದಲೇ ಸೋಡಾ ಬುಡ್ಡಿ ಎನ್ನುವ ಸಿನೆಮಾದಲ್ಲಿ ಪೋಷಕ ನಟಿಯಾಗಿ ನಟನೆ ಮಾಡಿದ್ದರು. ಆದರೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ್ದು ‘ದಿಯಾ’ ಸಿನೆಮಾದಲ್ಲಿ
ಖುಷಿಗೆ ಮದುವೆಯಾಗಿದೆ!!
ದಿಯಾ ಸಿನೆಮಾದಲ್ಲಿ ಆದಿ ದಿಯಾ ಒಂದಾಗದ್ದನ್ನು ನೋಡಿ ಕಣ್ಣೀರಿಟ್ಟಿರುವ ನಮಗೆ ಒಂದು ಶಾಕಿಂಗ್ ನ್ಯೂಸ್ ಇದೆ. ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಖುಷಿಯ ಪತಿಯ ಹೆಸರು ರಾಕೇಶ್. ರಾಕೇಶ್-ಖುಷಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಖುಷಿ ಪತಿ ರಾಕೇಶ್ ಬೆಂಗಳೂರಿನಲ್ಲಿ ಸ್ವಂತ ಬ್ಯುಸಿನೆಸ್ ಮಾಡುತ್ತಿದ್ದಾರೆ.
ಖುಷಿ ಒಂದು ಹೆಣ್ಣು ಮಗುವಿನ ತಾಯಿ
ಹೌದು ಈಗಾಗಲೇ ಗಂಡ ರಾಕೇಶ್ ರೊಂದಿಗೆ ಸುಖಿ ಜೀವನ ನಡೆಸುತ್ತಿರುವ ಖುಷಿಗೆ ಮುದ್ದಾದ ಹೆಣ್ಣು ಮಗುವಿದೆ. ಮಗುವಿನ ಹೆಸರು ತನಿಶಾ.
ಖುಷಿಯ ಮುಂದಿನ ಸಿನೆಮಾ:
ಖುಷಿ ನಟಿಸುತ್ತಿರುವ ಹೊಸ ಸಿನಿಮಾ ಹೆಸರು ‘ನಕ್ಷೆ’. ಈ ಚಿತ್ರ ಒಂದು ಸಸ್ಪೆನ್ಸ್ ತ್ರಿಲ್ಲರ್ ಕಥಾ ಹಂದರ ಹೊಂದಿದೆ ಎನ್ನಲಾಗಿದೆ. ಆದರೆ ಈ ಚಿತ್ರದ ನಾಯಕ, ನಿರ್ದೇಶಕ ಅಥವಾ ತಾಂತ್ರಿಕ ವರ್ಗದಲ್ಲಿ ಯಾರಿರಲಿದ್ದಾರೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ದಿಯಾ ಚೆಲುವೆಯ ಮುಂದಿನ ಸಿನೆಮಾ ಪಯಣಕ್ಕೆ ಮಹಾ ಎಕ್ಸ್ಪ್ರೆಸ್ ಸುದ್ದಿ ತಂಡದಿಂದ ಗುಡ್ ಲುಕ್..