- Advertisement -
- Advertisement -
ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಡವಿನಬಾಗಿಲುನಲ್ಲಿ ನೇತ್ರಾವತಿ ನದಿಗೆ ಸ್ನಾನ ಮಾಡುವುದಕ್ಕೆ ಇಳಿದಿದ್ದ ಯುವಕನೋರ್ವ ನೀರು ಪಾಲಾಗಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಮಾಣಿ ಸಮೀಪದ ಪಳಿಕೆ ನಿವಾಸಿ ಅಬ್ದುಲ್ ರಹಿಂ (31) ಮೃತ ದುರ್ದೈವಿ. ನಾಲ್ವರು ಯುವಕರ ಗುಂಪೊಂದು ನೇತ್ರಾವತಿ ನದಿಗೆ ಸ್ನಾನ ಮಾಡಲು ಇಳಿದಿದ್ದು, ಆ ವೇಳೆ ರಹಮಾನ್ ನೀರಿನಲ್ಲಿ ಮುಳುಗಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -