Wednesday, June 24, 2026
Homeತಾಜಾ ಸುದ್ದಿಚಿರಂಜೀವಿ ಸರ್ಜಾ ಬರ್ತಡೇ ದಿನವೇ ಆಗಮಿಸ್ತಾರಾ ಜ್ಯೂನಿಯರ್ ಸರ್ಜಾ?

ಚಿರಂಜೀವಿ ಸರ್ಜಾ ಬರ್ತಡೇ ದಿನವೇ ಆಗಮಿಸ್ತಾರಾ ಜ್ಯೂನಿಯರ್ ಸರ್ಜಾ?

- Advertisement -
- Advertisement -

ಬೆಂಗಳೂರು: ನಾಳೆ ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ.ಅವರ ಹುಟ್ಟುಹಬ್ಬದ ದಿನವೇ ಮೇಘನಾ ರಾಜ್ ಮಗುವಿಗೆ ಜನ್ಮ ನೀಡುತ್ತಾರೆ ಅನ್ನೋ ಬಗ್ಗೆ ಬಹಳ ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಹೀಗಿರುವಾಗಲೇ ಧ್ರುವ ಸರ್ಜಾ ಅವರು ಶೇರ್ ಮಾಡಿರುವ ವಿಡಿಯೋ ಒಂದು ಅದಕ್ಕೆ ಪುಷ್ಠಿ ನೀಡುತ್ತಿದೆ.

 ಯೆಸ್.. ನಟ ಧ್ರುವ ಸರ್ಜಾ ವಿಡಿಯೋ ಮೂಲಕ ಈ ಬಗ್ಗೆ ಸುಳಿವು ನೀಡಿದ್ದು, ಜೂನಿಯರ್ ಚಿರು ಆಗಮನದ ಕುರಿತು ತಿಳಿಸಿದ್ದು, ಸ್ವಾಗತಕ್ಕಾಗಿ ವಿಡಿಯೋವನ್ನು ಸಹ ಮಾಡಿದ್ದಾರೆ. ಇದರಲ್ಲಿ ಸರ್ಜಾ ಕುಟುಂಬದ ವಿವಿಧ ಹಿರಿಯರು ಹಾಗೂ ಗಣ್ಯರನ್ನು ಸಹ ತೋರಿಸಲಾಗಿದ್ದು, ಹ್ಯಾಪಿ ವೆಲ್ ಕಮ್ ಚಿರು ಎಂದು ಅರ್ಜುನ್ ಸರ್ಜಾ ಹೇಳುತ್ತಿರುವುದನ್ನು ಗಮನಿಸಬಹುದಾಗಿದೆ. ಮಾತ್ರವಲ್ಲ ಮೇಘನಾರಾಜ್ ಸೀಮಂತ ಕಾರ್ಯದ ಕೆಲ ಚಿತ್ರಣವನ್ನು ಸಹ ನೀಡಲಾಗಿದೆ. ಧ್ರುವ ಶೇರ್ ಮಾಡಿರುವ ಈ ವಿಡಿಯೋದ ಬಗ್ಗೆ ಇದೀಗ ಚರ್ಚೆಗಳು ನಡೆಯುತ್ತಿವೆ.

ನಾಳೆ ಚಿರು ಹುಟ್ಟುಹಬ್ಬ. ಹೀಗಾಗಿ ನಾಳೆಯೇ ಮೆಘನಾ ಜೂನಿಯರ್ ಚಿರುಗೆ ಜನ್ಮ ನೀಡಲಿದ್ದಾರಾ ಎಂಬ ಪ್ರಶ್ನೆ ಧ್ರುವ ಹಂಚಿಕೊಂಡ ವಿಡಿಯೋ ಬಳಿಕ ಮೂಡಿದೆ. ವಿಡಿಯೋ ಪೋಸ್ಟ್ ಮಾಡಿ ಸಾಲುಗಳನ್ನು ಬರೆದಿರುವ ಧ್ರುವ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದಾರೆ. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ನ್ನು ಸರ್ಜಾ ಕುಟುಂಬದ ಬಹುತೇಕರಿಗೆ ಟ್ಯಾಗ್ ಮಾಡಲಾಗಿದ್ದು, ಕೊನೆಗೆ ಜೈ ಹನುಮಾನ್ ಎಂದಿದ್ದಾರೆ.

- Advertisement -

Latest News

error: Content is protected !!