Friday, June 5, 2026
Homeತಾಜಾ ಸುದ್ದಿಚಿರು ಸರ್ಜಾ ಸಾವಿನ ದುಃಖದಿಂದ ಹೊರಬರಲಾರದೆ ಆಸ್ಪತ್ರೆ ಸೇರಿದ ತಮ್ಮ ಧ್ರುವ ಸರ್ಜಾ !

ಚಿರು ಸರ್ಜಾ ಸಾವಿನ ದುಃಖದಿಂದ ಹೊರಬರಲಾರದೆ ಆಸ್ಪತ್ರೆ ಸೇರಿದ ತಮ್ಮ ಧ್ರುವ ಸರ್ಜಾ !

- Advertisement -
- Advertisement -

ಬೆಂಗಳೂರು: ಕನ್ನಡ ಚಿತ್ರರಂಗದ ಯುವ ಸಾಮ್ರಾಟ್, ಅಭಿಮಾನಿಗಳ ಪ್ರೀತಿಯ ‘ಚಿರು’ ಚಿರಂಜೀವಿ ಸರ್ಜಾ ಸಾವಿನ ನಂತರ ಸಹೋದರ ಧ್ರುವ ಸರ್ಜಾ ಅಕ್ಷರಶಃ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ.

ಈ ಬೆನ್ನಲ್ಲೇ ಧ್ರುವ ಸರ್ಜಾರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಇದೀಗ ಡಿಸ್ಚಾರ್ಜ್​ ಆಗಿದ್ದಾರೆ.

ಎರಡು ದಿನಗಳ ಹಿಂದೆ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಧ್ರುವ ಚಿಕಿತ್ಸೆಯ ಬಳಿಕ ಇಂದು ಬಿಡುಗಡೆಯಾಗಿದ್ದಾರೆ. ಧ್ರುವ ಸರ್ಜಾ ಪೋಷಕರಿಗೂ ಅನಾರೋಗ್ಯ ಕಾಡಿದ್ದು, ಇದರಿಂದಲೂ ಧ್ರುವ ಮತ್ತಷ್ಟು ಕುಗ್ಗಿ ಹೋಗಿದ್ದರು ಎಂದು ತಿಳಿದುಬಂದಿದೆ.

ಚಿಕಿತ್ಸೆಯ ಬಳಿಕ ಮನೆಗೆ ತೆರಳಿರುವ ಧ್ರುವರಿಗೆ ಮಾವ ಅರ್ಜುನ್ ಸರ್ಜಾ ಕುಟುಂಬದ ಜೊತೆಗಿದ್ದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ಯಾರೂ ಮನೆಯ ಬಳಿ ಬರಬೇಡಿ ಎಂದು ಸರ್ಜಾ ಕುಟುಂಬ ಮನವಿ ಮಾಡಿದೆ.

- Advertisement -

Latest News

error: Content is protected !!