Saturday, May 18, 2024
Homeತಾಜಾ ಸುದ್ದಿಕೊರೊನಾ ಆರ್ಭಟದ ಮಧ್ಯೆ ಮುಂಬೈನಲ್ಲಿ ದಾಖಲೆ ಮಳೆ.. ಕೆಲವು ಪ್ರದೇಶಗಳು ಜಲಾವೃತ..!

ಕೊರೊನಾ ಆರ್ಭಟದ ಮಧ್ಯೆ ಮುಂಬೈನಲ್ಲಿ ದಾಖಲೆ ಮಳೆ.. ಕೆಲವು ಪ್ರದೇಶಗಳು ಜಲಾವೃತ..!

spot_img
- Advertisement -
- Advertisement -

ಮುಂಬೈ: ಹೆಮ್ಮಾರಿ ಕೊರೊನಾ ವೈರಸ್ ಅಬ್ಬರಕ್ಕೆ ನಲುಗಿ ಹೋಗಿರುವ ಮಹಾರಾಷ್ಟ್ರ ರಾಜಧಾನಿ ಮುಂಬೈ ಈಗ ಮಳೆ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಕೊರೊನಾ ತಡೆಗೆ ಸರ್ಕಾರ ಹರಸಾಹಸ ಪಡುತ್ತಿರುವಾಗಲೇ ಮಹಾ ಮಳೆಯಿಂದ ಇಡೀ ಮುಂಬೈ ನಗರ ಜಲದಿಗ್ಬಂಧನಕ್ಕೆ ಒಳಗಾಗಿದೆ.

ಮುಂಬೈನ ಹಿಂದ್ ಮಾತಾ ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಅಡಿಗಟ್ಟಲೆ ನೀರು ನಿಂತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಮುಂಬೈನ ಕೊಲಬಾ ಪ್ರದೇಶದಲ್ಲಿ ಬೆಳಿಗ್ಗೆ 8.30ರಿಂದ 11.30ರ ಅವಧಿಯ 3 ಗಂಟೆಗಳಲ್ಲಿ ಸುಮಾರು 157 ಮಿ.ಮೀ ಭಾರಿ ಮಳೆಯಾಗಿದೆ.

ಮುಂಬೈನ ಕಫಿ ಪರದೆ ಪ್ರದೇಶದಲ್ಲಿ ದಾಖಲೆಯ 105 ಮಿ.ಮೀಟರ್ ಮಳೆಯಾಗಿದ್ದರೆ, ಚತ್ರಪತಿ ಶಿವಾಜಿ ಟರ್ಮಿನಲ್ ಪ್ರದೇಶದಲ್ಲಿ 97 ಮಿ.ಮೀ, ವೊರ್ಲಿ 85 ಮಿ.ಮೀ, ಮಲಬಾರ್ ಹಿಲ್ಸ್ 81 ಮಿ.ಮೀ ಮಳೆಯಾಗಿದೆ.

ಮುಂಬಯಿಯ ಥಾಣೆ, ಡೊಂಬಿವಿಲಿ, ಸಯನ್, ಮಾಟುಂಗಾದಲ್ಲಿ ಪ್ರವಾಹ ನೀರು ಭಾರೀ ಪ್ರಮಾಣದಲ್ಲಿ ನಿಂತಿದೆ.

ಇಂದು ಮಾತ್ರವಲ್ಲದೆ ನಾಳೆಯೂ ಮುಂಬೈನಲ್ಲಿ ಭಾರಿ ಮಳೆಯಾಗಲಿದೆ ಎಂದು ಹಮಾಮಾನ ಇಲಾಖೆಯ ಉಪನಿರ್ದೇಶಕ ಕೆ.ಎಸ್ ಹೊಸಲಿಕರ್ ತಿಳಿಸಿದ್ದಾರೆ. ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಶನಿವಾರ ಹಾಗೂ ಭಾನುವಾರ ಕೂಡ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ

- Advertisement -
spot_img

Latest News

error: Content is protected !!