Saturday, June 6, 2026
Homeಕ್ರೀಡೆಯಪ್ಪಾ! ಇಂದೆಂಥಹ ಅಭಿಮಾನ:ಧೋನಿ ಮೇಲಿನ ಪ್ರೀತಿಗಾಗಿ ಮನೆಗೆ ಸಿಎಸ್ಕೆ ತಂಡದಂತೆ ಪೈಂಟ್ ಮಾಡಿಸಿದ ಫ್ಯಾನ್

ಯಪ್ಪಾ! ಇಂದೆಂಥಹ ಅಭಿಮಾನ:ಧೋನಿ ಮೇಲಿನ ಪ್ರೀತಿಗಾಗಿ ಮನೆಗೆ ಸಿಎಸ್ಕೆ ತಂಡದಂತೆ ಪೈಂಟ್ ಮಾಡಿಸಿದ ಫ್ಯಾನ್

- Advertisement -
- Advertisement -

ಚೆನ್ನೈ: ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಳಿಗಾಗಿ ಏನೆಲ್ಲಾ ಮಾಡ್ತಾರೆ ಅನ್ನೋದು ನೀವು ನೋಡೇ ಇರ್ತೀರಾ. ಸಿನಿಮಾ ತಾರೆಯರಿರಲಿ, ಇಲ್ಲಾ ಕ್ರಿಕೆಟ್ ಆಟಗಾರರ ಅಭಿಮಾನಿಗಳೇ ಇರಲಿ ಅವರ ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸ್ತಾರೆ. ಇಲ್ಲೊಬ್ಬ ಅಭಿಮಾನಿ ಧೋನಿ ಮೇಲಿನ ಅಭಿಮಾನವನ್ನು ಮನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಂತೆ ಪೈಂಟ್ ಮಾಡಿಸುವ ಮೂಲಕ ವ್ಯಕ್ತಪಡಿಸಿದ್ದಾರೆ.

ಹೌದು..ಕಡಲೂರು ಜಿಲ್ಲೆಯ ತಿಟ್ಟಕುಡಿ ಬಳಿಯ ಅರಂಗೂರ್ ಗ್ರಾಮದ ದುಬೈನಲ್ಲಿ ಕೆಲಸ ಮಾಡುತ್ತಿರುವ ಆರ್. ಗೋಪಿಕೃಷ್ಣನ್ ಅವರು 2008ರಿಂದ ಧೋನಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಐಪಿಎಲ್ ಪಂದ್ಯಗಳನ್ನು ಆಡುತ್ತಿರುವ ದುಬೈನ ಕ್ರೀಡಾಂಗಣದ ಸಮೀಪದಲ್ಲಿಯೇ ಇವರು ಕೆಲಸ ಮಾಡುತ್ತಿದ್ದರು. ಕೊರೊನಾ ಕಾರಣದಿಂದ ಪಂದ್ಯಗಳನ್ನು ನೋಡಲು ಪ್ರೇಕ್ಷಕರಿಗೆ ಅನುಮತಿ ಇಲ್ಲದ ಸಲುವಾಗಿ ಈ ಬಾರಿ ಹೋಗಿಲ್ಲ.

ದುಬೈನಲ್ಲಿ ಕೆಲಸ ಮಾಡುತ್ತಿದ್ದ ಗೋಪಿಕೃಷ್ಣನ್ ಅವರು, ಕೊರೊನಾ ಸಮಯದಲ್ಲಿ ತಮಿಳುನಾಡಿನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಇದೇ ವೇಳೆ ತಮ್ಮ ಮನೆಗೆ ಬಣ್ಣ ಹೊಡೆಸುವ ಕೆಲಸವನ್ನು ಇಟ್ಟುಕೊಂಡಿದ್ದರು. ಅದೇ ಸಮಯದಲ್ಲಿ ಐಪಿಎಲ್ ಆರಂಭವಾಗಿತ್ತು. ಜೊತೆಗೆ ಧೋನಿಯವರು ಉತ್ತಮ ಪ್ರದರ್ಶನ ನೀಡದೇ ಟೀಕೆಗೆ ಒಳಾಗುತ್ತಿದ್ದರು. ಹೀಗಾಗಿ ಅವರ ಮೇಲಿನ ಅಭಿಮಾನ ತೋರಿಸಲು 1.5 ಲಕ್ಷ ಖರ್ಚು ಮಾಡಿ ಧೋನಿಯವರ ಚಿತ್ರ ಮತ್ತು ಸಿಎಸ್‍ಕೆ ಲೋಗೋ ಸಮೇತ ಮನೆಗೆ ಹಳದಿ ಬಣ್ಣ ಹೊಡೆಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಗೋಪಿಯವರು, ಈ ಬಾರಿ ನನ್ನ ನೆಚ್ಚಿನ ತಂಡಕ್ಕೆ ಮೈದಾನದಲ್ಲಿ ಹೋಗಿ ಚೀಯರ್ ಮಾಡಲು ಆಗುತ್ತಿಲ್ಲ ಎಂದು ಬೇಸರವಾಗುತ್ತಿದೆ. ಆದರೆ ಮನೆಗೆ ಈ ರೀತಿ ಪೈಂಟ್ ಮಾಡಿಸಿದ್ದು, ಖುಷಿಕೊಟ್ಟಿದೆ. ನಮ್ಮ ಅಪ್ಪ-ಅಮ್ಮ ಮತ್ತು ಮನೆಯವರೆಲ್ಲರೂ ಕ್ರಿಕೆಟ್ ಪ್ರೇಮಿಗಳಾಗಿದ್ದು, ನಾನು ಈ ರೀತಿಯ ಬಣ್ಣ ಹೊಡೆಸುತ್ತೇನೆ ಎಂದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡರು ಎಂದು ಹೇಳಿದ್ದಾರೆ.

ಜೊತೆಗೆ ಈ ಧೋನಿ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿ, ಈಗ ನಡೆಯುತ್ತಿರುವ ಐಪಿಎಲ್‍ನಲ್ಲಿ ಧೋನಿ ಉತ್ತಮ ಪ್ರದರ್ಶನ ತೋರುತ್ತಿಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಈ ಋಣತ್ಮಾಕ ವಿಚಾರಗಳನ್ನು ಹೊಡೆದೊಡಿಸಲೆಂದೇ ನಾನು ಮನೆಗೆ ಈ ರೀತಿ ಪೈಂಟ್ ಮಾಡಿಸಿದ್ದೇನೆ. ಈಗ ಜನರು ಧೋನಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಆದರೆ ಅವರು ಒಂದು ಕಾಲದಲ್ಲಿ ಬೆಸ್ಟ್ ಫಿನಿಶರ್ ಎಂಬುದನ್ನು ಮರೆತ್ತಿದ್ದಾರೆ

- Advertisement -

Latest News

error: Content is protected !!