Wednesday, June 24, 2026
Homeಅಪರಾಧಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಾಕ್ಷಿದಾರ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಾಕ್ಷಿದಾರ

- Advertisement -
- Advertisement -

ಧರ್ಮಸ್ಥಳ: ಅನಾಮಿಕ ಮಾಸ್ಕ್ ಮ್ಯಾನ್ ವ್ಯಕ್ತಿಯು ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮುಂದೆ ಸ್ಫೋಟಕ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದಾನೆ ಎಂಬ ಮಾಹಿತಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಎಸ್‌ಐಟಿ ಅಧಿಕಾರಿಗಳ ಮುಂದೆ ಮಾಸ್ಕ್‌ ಮ್ಯಾನ್‌, ಧರ್ಮಸ್ಥಳದಿಂದ 2014ರ ನಂತರ ತಮಿಳುನಾಡಿನಲ್ಲಿ ನಾನು ವಾಸವಿದ್ದು, ಒಂದು ಗುಂಪು ನನ್ನನ್ನ 2023ರಲ್ಲಿ ಸಂಪರ್ಕಿಸಿ ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ಕೇಳಿತ್ತು. ಆಗ ನಾನು ಧರ್ಮಸ್ಥಳದಲ್ಲಿ ಸಿಗುತ್ತಿದ್ದ ಶವಗಳನ್ನು ಕಾನೂನು ಪ್ರಕಾರವೇ ಹೂತಿರುವುದಾಗಿ ತಿಳಿಸಿದ್ದು, ನಂತರದಲ್ಲಿ ಆ ಗುಂಪು ನನ್ನ ಇಲ್ಲಿಗೆ 2023ರ ಡಿಸೆಂಬರ್‌ನಲ್ಲಿ ಕರೆದುಕೊಂಡು ಬಂದಿದ್ದು, ಧರ್ಮಸ್ಥಳದ ಕುರಿತು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹಾಕಿತ್ತು. ತಮಿಳುನಾಡಿನಿಂದ ಆ ಗುಂಪು ನನ್ನನ್ನು ಕರೆತಂದಿತು. ಕೋರ್ಟ್ ಮುಂದೆ ಮೊದ ಮೊದಲು ಹೇಳಿಕೆ ನೀಡಲು ಭಯ ಆಗುತ್ತಿತ್ತು. ಬಳಿಕ ಧೈರ್ಯ ಬಂತು. ಹೀಗಾಗಿ ನಾನು ಇಲ್ಲಿಗೆ ಬಂದೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ

ಅನಾಮಿಕ ವ್ಯಕ್ತಿಯು ಪೊಲೀಸರ ಮುಂದೆ ಆ ಗುಂಪು ಬುರುಡೆ ತಂದು ಹೇಳಿದ ರೀತಿ ನಡೆದುಕೊಂಡೆ. ಮುಂದೆ ಏನೇನು ಹೇಳಬೇಕು ಎಂಬುದನ್ನು ಮೂವರು ಪ್ರತಿನಿತ್ಯ ಹೇಳಿಕೊಡುತ್ತಿದ್ದರು. ಅದೇ ರೀತಿ ಪೊಲೀಸರ ಮುಂದೆ ಹೇಳಿದ್ದೇನೆ ತಿಳಿಸಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!