- Advertisement -


- Advertisement -
ಮಂಗಳೂರು: ಧರ್ಮಸ್ಥಳದ ಕೇಸ್ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಪ್ರತ್ಯಕ್ಷನಾಗಿರುವ ಅನಾಮಿಕನೊಬ್ಬ ನಟೋರಿಯಸ್ ವ್ಯಕ್ತಿ, ಆತ ಹೆಣದ ಮೇಲಿದ್ದ ಚಿನ್ನ ಕದಿಯುತ್ತಿದ್ದ ಹಾಗೂ ಕ್ಷೇತ್ರದಿಂದ ಹಣವನ್ನು ಕದ್ದುತಿದ್ದು, ಈ ವಿಚಾರಕ್ಕಾಗಿಯೇ ಆತನನ್ನ ಕ್ಷೇತ್ರದಿಂದ ಉಚ್ಛಾಟನೆ ಮಾಡಲಾಗಿತ್ತು ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ವಕೀಲ ಕೇಶವ ಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.
ʻಅನಾಮಿಕ ವ್ಯಕ್ತಿ ಎನ್ನುತ್ತಿರುವ ಆ ಭೀಮ ಎಂಬ ವ್ಯಕ್ತಿಯು ನಟೋರಿಯಸ್ ಕಳ್ಳನಾಗಿದ್ದು, ಆತ ಸತ್ತ ಅಪರಿಚಿತ ಮೃತದೇಹಗಳ ಮೇಲಿದ್ದಂತಹ ಚಿನ್ನಾಭರಣ ಕದಿಯುತ್ತಿದ್ದ. ಅಷ್ಟೇ ಅಲ್ಲದೆ ಆತ ಧರ್ಮಸ್ಥಳ ಕ್ಷೇತ್ರದಿಂದ ಹಣವನ್ನು ಕೂಡ ಕದಿಯುತ್ತಿದ್ದ ಎಂದು ಆರೋಪ ಮಾಡಿದ್ದಾರೆ.
ಎಸ್.ಐ.ಟಿಯು ಧರ್ಮಸ್ಥಳ ಕ್ಷೇತ್ರದ ಪ್ರಕರಣದ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಕ್ಷೇತ್ರಕ್ಕೆ ಮಸಿ ಬಳಿಯುತ್ತಿರುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
- Advertisement -


