Wednesday, June 24, 2026
Homeಕರಾವಳಿಅಳಿಕೆಯ ಸತ್ಯಸಾಯಿ ಲೋಕಸೇವಾ ಶಿಕ್ಷಣಸಂಸ್ಥೆಯ ವಿದ್ಯಾರ್ಥಿಗಳಿಂದ ಕಲಾಸೇವೆ

ಅಳಿಕೆಯ ಸತ್ಯಸಾಯಿ ಲೋಕಸೇವಾ ಶಿಕ್ಷಣಸಂಸ್ಥೆಯ ವಿದ್ಯಾರ್ಥಿಗಳಿಂದ ಕಲಾಸೇವೆ

- Advertisement -
- Advertisement -

ಧರ್ಮಸ್ಥಳದಲ್ಲಿ ಅಳಿಕೆಯ ಸತ್ಯಸಾಯಿ ಲೋಕಸೇವಾ ಶಿಕ್ಷಣಸಂಸ್ಥೆಯ ʻಸಾಯಿ ಸಿಂಪನಿʼ ತಂಡದ ವಿದ್ಯಾರ್ಥಿಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್‌ ಹಾಗೂ ಸುಪ್ರಿಯಾ ಹರ್ಷೇಂದ್ರಕುಮಾರ್‌ ಅವರು ಉಪಸ್ಥಿತಿಯಲ್ಲಿ ಕಲಾಸೇವೆಯನ್ನು ಅರ್ಪಿಸಿದರು.

ಅಳಿಕೆ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್‌ ನೇತೃತ್ವದಲ್ಲಿ ಈ ಕಲಾಸೇವೆಯು ನೇರವೇರಿತು.

ವಿದ್ಯಾರ್ಥಿಗಳು ಪೊಲೀಸ್‌ ಬ್ಯಾಂಡ್‌ ಸೆಟ್‌ ವಾದನದಲ್ಲಿ ವಿಶೇಷ ತರಬೇತಿಯನ್ನ ಪಡೆದಿದ್ದು, ʻಸಾರೇ ಜಹಾಂ ಸೆ ಅಚ್ಚಾ, ಸತ್ಯಂ ಶಿವಂ ಸುಂದರಂʼ ಮೊದಲಾದ ರಾಷ್ಟ್ರಭಕ್ತಿಯ ಪದ್ಯಗಳು ಪ್ರಸ್ತುತಪಡಿಸಿದರು. 

ಒಟ್ಟಾಗಿ 43 ವಿದ್ಯಾರ್ಥಿಗಳು ಈ ಕಲಾಸೇವೆಯಲ್ಲಿ ಪಾಲ್ಗೊಂಡಿದ್ದು ಅವರೊಂದಿಗೆ ಉಪನ್ಯಾಸಕರಾದ ಚಂದ್ರಶೇಖರ ಭಟ್‌, ಜನಾರ್ಧನ ನಾಯ್ಕ, ಚಂದ್ರಶೇಖರ ಜೈನ್‌ ಮತ್ತು ನಾಗರಾಜ ಅವರಿದ್ದರು.  

- Advertisement -

Latest News

error: Content is protected !!