Wednesday, June 3, 2026
Homeಕರಾವಳಿಸುಬ್ರಮಣ್ಯ; ಪ್ರವಾಸಿಗರ ಕಾರಿನ ಗಾಜು ಒಡೆದು ಚಿನ್ನ, ದಾಖಲೆ ಇದ್ದ ಬ್ಯಾಗ್‌ ಕಳವು

ಸುಬ್ರಮಣ್ಯ; ಪ್ರವಾಸಿಗರ ಕಾರಿನ ಗಾಜು ಒಡೆದು ಚಿನ್ನ, ದಾಖಲೆ ಇದ್ದ ಬ್ಯಾಗ್‌ ಕಳವು

- Advertisement -
- Advertisement -

ಸುಬ್ರಹ್ಮಣ್ಯ ದೇಗುಲಕ್ಕೆ ಎಂದು ಬಂದಿದ್ದ ಕೇರಳದ ಭಕ್ತರೊಬ್ಬರ ಕಾರಿನ ಗಾಜು ಒಡೆದು ಚಿನ್ನ, ದಾಖಲೆ ಇದ್ದ ಬ್ಯಾಗ್‌ ಕಳವು ಗೈದಿರುವ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.ಈ ಬಗ್ಗೆ ಕಣ್ಣೂರು ಜಿಲ್ಲೆಯ ಸುಯಿಶ್‌ ಟಿ.ಸಿ. (34) ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.

ಸುಯಿಶ್ ಅವರು ತಮ್ಮ ಕಾರಿನಲ್ಲಿ, ತನ್ನ ಚಿಕ್ಕಮ್ಮನೊಂದಿಗೆ ಕುಕ್ಕೆಗೆ ಬಂದಿದ್ದರು. ರಥ ಬೀದಿಯ ಪಕ್ಕದಲ್ಲಿರುವ ಪಾರ್ಕಿಂಗ್‌ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ. ಬಳಿಕ ಪೂಜಾ ಕಾರ್ಯಕ್ರಮ ಮುಗಿಸಿ ಸ್ವಲ್ಪ ಸಮಯದ ಬಳಿಕ ಕಾರಿನ ಬಳಿ ಬಂದು ನೋಡಿದ ವೇಳೆ ಕಾರಿನ ಹಿಂಬದಿಯ ಗಾಜನ್ನು ಪುಡಿ ಮಾಡಿ ಕಾರಿನಲ್ಲಿದ್ದ ಎರಡು ಬ್ಯಾಗ್‌ ಗಳನ್ನು ಕಳ್ಳರು ಕಳವುಗೈದಿರುವುದು ಕಂಡುಬಂದಿದೆ.

 ಬ್ಯಾಗ್‌ನಲ್ಲಿದ್ದ ಅಂದಾಜು 14 ಗ್ರಾಂ ತೂಕದ ಚಿನ್ನದ ಬ್ರಾಸ್‌ ಲೈಟ್‌ ಹಾಗೂ ಆಧಾರ ಕಾರ್ಡ್‌, ಎಟಿಎಂ, ಇತ್ಯಾದಿ ಕಳವಾಗಿವೆ ಎಂಜು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!