Wednesday, June 3, 2026
Homeಕರಾವಳಿಉಡುಪಿಕರಾವಳಿಯ 6 ಲೈಟ್‌ಹೌಸ್‌ಗಳ ಅಭಿವೃದ್ಧಿ; ಶೋಭಾ ಕರಂದ್ಲಾಜೆ

ಕರಾವಳಿಯ 6 ಲೈಟ್‌ಹೌಸ್‌ಗಳ ಅಭಿವೃದ್ಧಿ; ಶೋಭಾ ಕರಂದ್ಲಾಜೆ

- Advertisement -
- Advertisement -

ಕಾಪು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ 75 ಲೈಟ್‌ಹೌಸ್ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಜೋಡಣೆಗೆ ಒತ್ತು ನೀಡಲಾಗಿದ್ದು, ಕರಾವಳಿ ಕರ್ನಾಟಕದ ಕಾಪು, ಸುರತ್ಕಲ್, ಕುಂದಾಪುರ, ಭಟ್ಕಳ, ಗೋಕರ್ಣ, ಕಾರವಾರ ಸಹಿತ 6 ಲೈಟ್‌ಹೌಸ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮೂಲಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಮೀನುಗಾರಿಕೆಗೆ ವಿಶೇಷ ಒತ್ತು ನೀಡುವ ಕೆಲಸ ಕೇಂದ್ರ ಸರಕಾರದಿಂದ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಕೇಂದ್ರ ಸರಕಾರದ ಬಂದರು, ನೌಕಾ ಸಾರಿಗೆ ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ದೀಪಸ್ತಂಭಗಳು ಮತ್ತು ದೀಪನೌಕೆಗಳ ನಿರ್ದೇಶನಾಲಯವು ದೇಶದ 75 ಲೈಟ್‌ಹೌಸ್‌ಗಳಲ್ಲಿ ನಡೆಸಿದ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ತಮಿಳುನಾಡಿನ ತೂತುಕುಡಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವೀಡಿಯೋ ಕಾನ್ಸರೆನ್ಸ್ ಪ್ರಯುಕ್ತ ಬುಧವಾರ ಕಾಪು ಲೈಟ್‌ಹೌಸ್ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

- Advertisement -

Latest News

error: Content is protected !!