Wednesday, June 3, 2026
Homeಕರಾವಳಿಪುತ್ತೂರು; ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ಪುತ್ತಿಲ ಪರಿವಾರದಿಂದ ಘೋಷಣೆ

ಪುತ್ತೂರು; ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ಪುತ್ತಿಲ ಪರಿವಾರದಿಂದ ಘೋಷಣೆ

- Advertisement -
- Advertisement -

ಪುತ್ತೂರು: ಬಿಜೆಪಿ ನಾಯಕರೊಂದಿಗೆ ಅರುಣ್ ಕುಮಾರ್ ಪುತ್ತಿಲ ಅವರ ನಡೆಸಿದ್ದ ಮಾತುಕತೆ ವಿಫಲಗೊಂಡ ಹಿನ್ನಲೆ ಇದೀಗ ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರೆ ಎಂದು ಪುತ್ತಿಲ ಪರಿವಾರ ಘೋಷಿಸಿದೆ.

ಇಂದು ಪುತ್ತೂರಿನಲ್ಲಿ ಈ ಬಗ್ಗೆ ಪುತ್ತಿಲ ಪರಿವಾರದಿಂದ ಸುದ್ದಿಗೋಷ್ಟಿ ನಡೆಯಿತು. ಈ ವೇಳೆ  ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತಾ ಅರುಣ್ ಕುಮಾರ್ ಪುತ್ತಿಲ ದಕ್ಷಿಣಕನ್ನಡ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದಿದ್ದಾರೆ.

ಬಿಜೆಪಿ ಸೇರ್ಪಡೆಗೆ ಕುರಿತಂತೆ ಹಲವು ಸುತ್ತಿನ ಮಾತುಕತೆ ನಡೆದಿತ್ತು, ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಪುತ್ತಿಲ ಭೇಟಿಯಾಗಿದ್ದರು,ಯ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಹಲವು ಬೇಡಿಕೆ ಇಟ್ಟಿದ್ದ ಪುತ್ತಿಲ ಪರಿವಾರ ಇಟ್ಟಿತ್ತು, ಆದರೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರ್ಪಡೆಯಾಗ ಬೇಕೆಂದು ಸೂಚಿಸಿದ್ದರು. ಈ ಹಿನ್ನಲೆ ಮಾತುಕತೆ ವಿಫಲವಾಗಿದ್ದು. ಪುತ್ತಿಲ ಪರಿವಾರದ ಷರತ್ತಿಗೆ ಯಾವುದೇ ಮಾನ್ಯತೆ ನೀಡದ ಹಿನ್ನಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆಗೆ ಪುತ್ತಿಲ ಪರಿವಾರ ನಿರ್ಧರಿಸಿದೆ ಎಂದಿದ್ದಾರೆ.

- Advertisement -

Latest News

error: Content is protected !!