Wednesday, June 24, 2026
Homeತಾಜಾ ಸುದ್ದಿ‘ಬಿಗ್ ಬಾಸ್’ ಕಾರ್ತಿಕ್ ಮಹೇಶ್ ಹಾಗೂ ನಮೃತಾ ಗೌಡ ಮದುವೆ..!; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ...

‘ಬಿಗ್ ಬಾಸ್’ ಕಾರ್ತಿಕ್ ಮಹೇಶ್ ಹಾಗೂ ನಮೃತಾ ಗೌಡ ಮದುವೆ..!; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋಸ್

- Advertisement -
- Advertisement -

ಬೆಂಗಳೂರು: ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -10 ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ಸ್ಪರ್ಧಿ ನಮೃತಾ ಗೌಡ ಅವರ ಮದುವೆ ಲುಕ್ ವುಳ್ಳ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.!. ಮದುವೆ ಲುಕ್ ನಲ್ಲಿ ಕಾಣಿಸಿಕೊಂಡಿರುವ ಫೋಟೋಸ್ ಗಳನ್ನು ಸ್ವತಃ ನಮೃತಾ ಗೌಡ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ನಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಆತ್ಮೀಯವಾಗಿದ್ದರು. ಬಿಗ್ ಬಾಸ್ ಮುಗಿದ ಬಳಿಕವೂ ಕಾರ್ತಿಕ್ ಹಾಗೂ ನಮೃತಾ ಸ್ನೇಹ ಹಾಗೆಯೇ ಇದೆ. ಇತ್ತೀಚೆಗೆ ಕಾರ್ತಿಕ್ ಹಾಗೂ ನಮೃತಾ ಗೌಡ ಅವರು ಜೊತೆಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ವಧು – ವರರಾಗಿ ಲುಕ್ ನಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜಾಹೀರಾತಿನ ಫೋಟೋಗಳನ್ನು ನೋಡಿ ಕೆಲ ಫ್ಯಾನ್ಸ್ ಶಾಕ್ ಆಗಿದ್ದಾರೆ.

ಕಾರ್ತಿಕ್ – ನಮೃತಾ ಮದುವೆ ಆಗಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ. ಅಸಲಿಗೆ ಇದೊಂದು ಜಾಹೀರಾತಿಗಾಗಿ ನಡೆದ ಫೋಟೋ ಶೂಟ್ ಆಗಿದೆ. ಇದರಲ್ಲಿ ನಟಿ ಪ್ರೇಮಾ ಕೂಡ ಕಾಣಿಸಿಕೊಂಡಿದ್ದಾರೆ.

- Advertisement -

Latest News

error: Content is protected !!