- Advertisement -
![]()
- Advertisement -
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ (ಎಂಆರ್‌ಪಿಎಲ್)ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂಡೂರು ಶ್ಯಾಮಪ್ರಸಾದ್ ಕಾಮತ್ ಬುಧವಾರದಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಹೈಡೋಕಾರ್ಬನ್ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಹೊಂದಿರುವ ಅವರು ಎಂಐಟಿ ಮಣಿಪಾಲದಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ, ಮಣಿಪಾಲದ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೋಮಾ ಪದವಿ ಪಡೆದವರು. ಈ ಮೊದಲು ಅವರು ಕಾರ್ಯಕಾರಿ ನಿರ್ದೇಶಕ(ರಿಫೈನರಿ)ರಾಗಿ ಸೇವೆ ಸಲ್ಲಿಸಿದ್ದು, ಎಂಆರ್‌ಪಿಎಲ್‌ನ ಕಾರ್ಯನಿರ್ವಹಣೆ, ತಾಂತ್ರಿಕ ಸೇವೆ, ಉತ್ಪಾದನಾ ಯೋಜನೆಗಳಲ್ಲಿ ಚತುರತೆ ಮೆರೆದವರು.
- Advertisement -


