Saturday, October 17, 2026
Homeಕರಾವಳಿಮಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ವಿಟ್ಲದ ಪದವಿ ವಿದ್ಯಾರ್ಥಿ ಬಲಿ

ಮಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ವಿಟ್ಲದ ಪದವಿ ವಿದ್ಯಾರ್ಥಿ ಬಲಿ

- Advertisement -
- Advertisement -

ವಿಟ್ಲ; ಮಂಗಳೂರಿನಲ್ಲಿ ನಡೆದ ರಸ್ತೆ ಅಪಘಾತಕ್ಕೆ ವಿಟ್ಲದ ಪದವಿ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರವೀತ್ ಕುಮಾರ್ (22) ಮೃತ ವಿದ್ಯಾರ್ಥಿ. ಪ್ರವೀತ್ ಬೆಳ್ತಂಗಡಿಯ ಮುಂಡೂರಿನ ಪರಂಬುಡೆಯ ಶೇಖರ ಆಚಾರ್ಯ ಹಾಗೂ ಭಾರತಿ ಆಚಾರ್ಯರ ಪುತ್ರ.

ಅರ್ಕುಳ ಸಮೀಪ ಪ್ರವೀತ್ ಓಡಿಸುತ್ತಿದ್ದ ಬೈಕ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಐಸ್ ಕ್ರೀಂ ಸಾಗಿಸುತ್ತಿದ್ದ ವಾಹನ ಅವರ ಮೇಲೆ ಹರಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪ್ರವೀತ್ ಸಸಿ ಹಿತ್ಲು ಮೇಳದ ಯಕ್ಷಗಾನ ಕಲಾವಿದರಾಗಿದ್ದರು.

- Advertisement -

Latest News

error: Content is protected !!