- Advertisement -
- Advertisement -
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಯಾರಿಗೆಲ್ಲಾ ಸುತ್ತಿಕೊಳ್ಳುತ್ತೆ, ಯಾರಿದ್ದಾರೆ ಯಾರಿಲ್ಲ ಅಂತಾ ಹೇಳೋದಕ್ಕೇನೆ ಸಾಧ್ಯವಾಗುತ್ತಿಲ್ಲ. ಇದೀಗ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ಬಾಲಿವುಡ್ ನಟಿ, ಕನ್ನಡತಿ, ದೀಪಿಕಾ ಪಡುಕೋಣೆ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿದೆ.
ಈ ಕುರಿತು NDPS ಕಾಯ್ದೆಯಡಿ NCB ಇಂದ CCBಗೆ ನೋಟೀಸ್ ಕೂಡ ಬಂದಿದೆ. ಹಾಗಾಗಿ ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಮತ್ತೊಂದು ಕಡೆ ಬಂಧಿತ ಆರೋಪಿ ಅನಿಕಾ ಬಿಚ್ಚಿಟ್ಟ ಕೋಡ್ ವಡ್೯ ಹಾಗೂ ಮೊಬೈಲ್ ಚಾಟ್ ಕರಾಳ ಸತ್ಯವನ್ನು ಬಿಚ್ಚಿಚ್ಚಿದೆ. DSNJ ಅಂದರೆ ದೀಪಿಕಾ, ಶ್ರದ್ಧಾ ಕಪೂರ್, ಕರಿಷ್ಮಾ , ನಮ್ರತಾ ಶಿರೋಡ್ಕರ್, ಜಯಾ ಈ ರೀತಿಯ ಕೋಡ್ ವರ್ಡ್ ಅನಿಕಾ ಮೂಲಕ ಬಯಲಾಗಿದೆ.
ಇದೀಗ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಗೆ ಎನ್ ಸಿಬಿ ನೋಟಿಸ್ ನೀಡಲಾಗಿದೆ. ದೀಪಿಕಾಗೆ ಮಾದಕ ವಸ್ತುಗಳನ್ನು ಮ್ಯಾನೇಜರ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.
- Advertisement -