Friday, June 5, 2026
Homeಕರಾವಳಿಕಾಸರಗೋಡು'ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಸರಣಿ ಬಾಂಬ್ ಸ್ಫೋಟದ ರೂವಾರಿ ಅಂದರ್'

‘ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಸರಣಿ ಬಾಂಬ್ ಸ್ಫೋಟದ ರೂವಾರಿ ಅಂದರ್’

- Advertisement -
- Advertisement -

ಕೇರಳ: ಬೆಂಗಳೂರಿನ ಒಂಭತ್ತು ಕಡೆ ಬಾಂಬ್ ಸ್ಫೋಟ ನಡೆಸಿದ್ದ ಆರೋಪಿ ಶೋಯೆಬ್ ಸೋಮವಾರದಂದು ದುಬೈನಿಂದ ಬರುತ್ತಿರುವ ಮಾಹಿತಿ ಪಡೆದಿದ್ದ ಸಿಸಿಬಿ ಅಧಿಕಾರಿಗಳು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ್ದ ಆರೋಪಿ 2008ರ ಜುಲೈ 25ರಂದು ಬೆಂಗಳೂರಿನ ಒಂಭತ್ತು ಕಡೆ ಬಾಂಬ್ ಸ್ಫೋಟ ನಡೆಸಿದ್ದ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ. ಬಂಧಿತ ಆರೋಪಿ ಶೋಯಬ್ ದುಬೈನಲ್ಲಿ ತಲೆಮರೆಸಿಕೊಂಡಿದ್ದ.

ಕೇರಳದ ಕಣ್ಣೂರು ಮೂಲದ ಆರೋಪಿ ತನ್ನ ಸಹಚರರ ಜೊತೆಗೂಡಿ 2008ರ ಜುಲೈ 25ರಂದು ಮಡಿವಾಳ, ಮೈಸೂರು ರಸ್ತೆ, ಆಡುಗೋಡಿ, ಕೋರಮಂಗಲ, ವಿಠ್ಠಲ್ ಮಲ್ಯ ರಸ್ತೆಯಲ್ಲಿ ಬಾಂಬ್ ಸ್ಪೋಟ ನಡೆಸಿದ್ದು, ಈ ಸಂದರ್ಭದಲ್ಲಿ ಮಡಿವಾಳ ಬಸ್ ಶೆಲ್ಟರ್ ನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಬಲಿಯಾಗಿದ್ದರು.

- Advertisement -

Latest News

error: Content is protected !!