Monday, June 8, 2026
Homeಕರಾವಳಿಬಿಸಿನೀರು ಮೈ ಮೇಲೆ ಬಿದ್ದು ಎರಡು ವರ್ಷದ ಮಗು ಸಾವು !

ಬಿಸಿನೀರು ಮೈ ಮೇಲೆ ಬಿದ್ದು ಎರಡು ವರ್ಷದ ಮಗು ಸಾವು !

- Advertisement -
- Advertisement -

ಮೈಸೂರು: ಮೈಸೂರು ತಾಲೂಕು ದಾಸನಕೊಪ್ಪಲಿನಲ್ಲಿ ಬಿಸಿನೀರು ಮೈ ಮೇಲೆ ಬಿದ್ದು ಎರಡು ವರ್ಷದ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ.

ಇಲ್ಲಿನ ನಿವಾಸಿ ಫೋಟೋಗ್ರಾಫರ್ ರಾಮು ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರಿ ಎರಡು ವರ್ಷದ ಆದ್ಯ ಮೃತಪಟ್ಟ ಪುಟ್ಟ ಮಗು.

ಸ್ನಾನ ಮಾಡಿಸಲು ತಾಯಿ ಜಯಲಕ್ಷ್ಮಿ ಬಿಸಿನೀರು ತಂದಿಟ್ಟು ತಣ್ಣೀರು ತರಲು ಹೋದಾಗ ಆ ಬಿಸಿನೀರಿನ ಪಾತ್ರೆಯನ್ನು ಆದ್ಯ ತನ್ನ ಮೈಮೇಲೆ ಎಳೆದುಕೊಂಡಿದ್ದಾಳೆ. ಮಗುವಿನ ಚೀರಾಟ ಕೇಳಿ ಓಡಿ ಬಂದು ನೋಡಿದಾಗ ಹೀಗಾಗಿತ್ತು.

ತಕ್ಷಣ ಮಗುವನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಈ ಬಗ್ಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!