Thursday, July 23, 2026
HomeWorldಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಮಂಗಳೂರಿನ ಆಟಗಾರ ಅಶ್ವಲ್ ರೈ ದಾಖಲೆ ಮೊತ್ತಕ್ಕೆ ಮಾರಾಟ…!

ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಮಂಗಳೂರಿನ ಆಟಗಾರ ಅಶ್ವಲ್ ರೈ ದಾಖಲೆ ಮೊತ್ತಕ್ಕೆ ಮಾರಾಟ…!

- Advertisement -
- Advertisement -

ಕೊಚ್ಚಿನ್: ಐಪಿಎಲ್ ಮಾದರಿಯಂತೆ ವಾಲಿಬಾಲ್ ನಲ್ಲೂ ಹೊಸ ಲೀಗ್ ಆರಂಭವಾಗಿದೆ. ಇದರ ಮೊದಲ ಸೀಸನ್ ನ ಹರಾಜು ಪ್ರಕ್ರಿಯೆ ಇಂದು ಕೊಚ್ಚಿನ್ ನಲ್ಲಿ ನಡೆದಿದೆ.

ಇದರಲ್ಲಿ ಮಂಗಳೂರಿನ ಆಟಗಾರ ಅಶ್ವಲ್ ರೈ ದಾಖಲೆಯ ಮೊತ್ತಕ್ಕೆ ಕೋಲ್ಕತ್ತಾ ಥಂಡಲ್ ಬೋಲ್ಟ್ಸ್ ತಂಡದ ಪಾಲಾಗಿದ್ದಾರೆ. ಇವರನ್ನು 15 ಲಕ್ಷ ರೂ. ಬೆಲೆಗೆ ಕೋಲ್ಕತ್ತಾ ತಂಡ ಖರೀದಿಸಿತು.

ಹಾಗೇ ಕಾರ್ತಿಕ ಎ ಮತ್ತು ಜೆರೋಮ್ ವಿನಿತ್ ಇವರನ್ನು ಪ್ರೈಮ್ ವಾಲಿಬಾಲ್ ಹರಾಜಿನಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಹಾಗೂ ಕ್ಯಾಲಿಕಟ್ ಹೀರೋಸ್ ತಂಡಗಳು ರೂ. 15 ಲಕ್ಷ ಖರೀದಿಸಿದವು.

ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಏಳು ತಂಡಗಳು ಭಾಗವಹಿಸುತ್ತಿದೆ, ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಚೆನ್ನೈ ಬ್ಲಿಟ್ಜ್, ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡಗಳಾಗಿವೆ.

- Advertisement -

Latest News

error: Content is protected !!