Monday, June 8, 2026
Homeಕರಾವಳಿಊಟ ಮಾಡುವಾಗ ಮಾಂಸದ ತುಂಡು ಗಂಟಲಲ್ಲಿ ಸಿಲುಕಿ ವಿದ್ಯಾರ್ಥಿನಿ ಸಾವು

ಊಟ ಮಾಡುವಾಗ ಮಾಂಸದ ತುಂಡು ಗಂಟಲಲ್ಲಿ ಸಿಲುಕಿ ವಿದ್ಯಾರ್ಥಿನಿ ಸಾವು

- Advertisement -
- Advertisement -

ಕೇರಳ; ಊಟ ಮಾಡುವಾಗ ಮಾಂಸದ ತುಂಡು ಗಂಟಲಲ್ಲಿ ಸಿಲುಕಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. ಯಹ್ಯಾ ಎಂಬವರ ಮಗಳು ಫಾತಿಮಾ ಹನಾನ್ (22) ಮೃತ ವಿದ್ಯಾರ್ಥಿನಿ.

ಇನ್ನು ಘಟನೆ ನಡೆದ ಕೂಡಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಮನ್ನಾರ್ ಕಾಡ್ ನಲ್ಲಿ ಎಂ ಎಸ್ಸಿ ಸೈಕಾಲಜಿ ವಿದ್ಯಾಭ್ಯಾಸ ಮಾಡುತ್ತಿದ್ದ ಆಕೆ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಮಾಂಸದ ತುಂಡು ಗಂಟಲಲ್ಲಿ ಸಿಲುಕಿಕೊಂಡಿತ್ತು. ತಕ್ಷಣ ಅವರನ್ನು ಪೆರಿಂತಲ್ಮಣ್ಣಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಕೂಡ ನಡೆಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾರೆ. ಮೃತ ಫಾತಿಮಾ ತಾಯಿ, ಪತಿ, ಸಹೋದರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!