Friday, June 5, 2026
Homeತಾಜಾ ಸುದ್ದಿದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬೆಂಗಳೂರಿನಲ್ಲೂ ಯುವತಿಯ ಭೀಕರ ಕೊಲೆ: ಹತ್ಯೆಗೈದು 30ಕ್ಕೂ ಹೆಚ್ಚು...

ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬೆಂಗಳೂರಿನಲ್ಲೂ ಯುವತಿಯ ಭೀಕರ ಕೊಲೆ: ಹತ್ಯೆಗೈದು 30ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟಿದ್ದ ಹಂತಕ

- Advertisement -
- Advertisement -

ಬೆಂಗಳೂರು: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬೆಂಗಳೂರಿನಲ್ಲೂ ಯುವತಿಯ ಭೀಕರ ಕೊಲೆಯಾಗಿದೆ. ಹಂತಕ 26 ವರ್ಷದ ಮಹಾಲಕ್ಷ್ಮೀ ಎಂಬ ಯುವತಿಯನ್ನು ಹತ್ಯೆಗೈದು 30ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟಿದ್ದಾನೆ.ಪ್ರಕರಣ ಬೆಂಗಳೂರಿಗರಲ್ಲಿ ನಡುಕ ಹುಟ್ಟಿಸಿದೆ.

ಬೆಂಗಳೂರಿನ ವೈಯಾಲಿಕಾವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಅವರು ಭೇಟಿ ನೀಡಿದ್ದು, ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯುವತಿ ಬೇರೆ ರಾಜ್ಯದವರಾಗಿದ್ದು ಕರ್ನಾಟಕದಲ್ಲಿ ಕೆಲಸ ಮಾಡಿಕೊಂಡಿದ್ದು ಹಲವು ವರ್ಷಗಳ ಹಿಂದೆ ಇಲ್ಲಿಯೇ ಸೆಟಲ್ ಆಗಿದ್ದರು. ಸುಮಾರು 26 ವಯಸ್ಸಿನ ಯುವತಿ ಎಂದು ತಿಳಿದುಬಂದಿದೆ. ಯುವತಿಯನ್ನು ತುಂಡು ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದರು. ಹೊರ ರಾಜ್ಯದ ಯುವತಿ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದರು.

ಯುವತಿಯ ಕೊಲೆ ಸುಮಾರು ಹತ್ತರಿಂದ ಹದಿನೈದು ದಿನಗಳ ಹಿಂದೆಯೇ ನಡೆದಿದೆ. ಮೊದಲ ಮಹಡಿಯಲ್ಲಿರುವ 1 BHK ಮನೆಯಲ್ಲಿ ಒಂದು ಕೊಲೆ ನಡೆದಿದೆ. 26 ವರ್ಷದ ಯುವತಿಯ ದೇಹವನ್ನು ತುಂಡು ಮಾಡಿದ್ದಾರೆ.ಕೆಲವು ದಿನಗಳ ಹಿಂದೆ ಕೊಲೆಯಾಗಿರುವ ಮಾಹಿತಿ ಇದೆ. ಸ್ಥಳಕ್ಕೆ ಸೋಕೋ ಟೀಮ್ ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಇನ್ನೂ ಎಫ್ ಎಸ್ ಎಲ್ ಟೀಮ್ ಬರಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆರರಿಂದ ಏಳು ತಿಂಗಳಿಂದ ಮಹಾಲಕ್ಷ್ಮಿ ಈ ಒಂದು ಮನೆಯಲ್ಲಿ ವಾಸ ಮಾಡುತ್ತಿದ್ದಳು. ಮದುವೆಯಾಗಿ ಗಂಡನಿಂದ ಮಹಾಲಕ್ಷ್ಮಿ ದೂರ ಇದ್ದಳು. ಕಳೆದ ಎರಡು ದಿನಗಳಿಂದ ಮನೆಯಿಂದ ವಾಸನೆ ಬರುತ್ತಿತ್ತು.ಇಂದು ಅಕ್ಕ ಪಕ್ಕದವರು ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಯುವತಿ ಮಹಾಲಕ್ಷ್ಮಿಯ ತಾಯಿ, ಅಕ್ಕ, ಮನೆ ಬಳಿ ಬಂದಿದ್ದರು. ಮನೆಯ ಬೀಗ ಒಡೆದು ಒಳಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೀಗ ತೆಗೆದಾಗ ಶವದಿಂದ ಹುಳಗಳು ಹೊರಗಡೆ ಬರುತ್ತಿದ್ದ ನೋಡಿ ಪೊಲೀಸರು ಶಾಕ್ ಆಗಿದ್ದಾರೆ.ಕಳೆದ ಹತ್ತರಿಂದ ಹದಿನೈದು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

- Advertisement -

Latest News

error: Content is protected !!