Thursday, June 4, 2026
Homeಅಪರಾಧಬೆಳ್ತಂಗಡಿ: ಕುಡಿತದ ಅಮಲಿನಲ್ಲಿ ಯುವಕನೋರ್ವ ತನ್ನ ತಾಯಿ ಹಾಗು ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ

ಬೆಳ್ತಂಗಡಿ: ಕುಡಿತದ ಅಮಲಿನಲ್ಲಿ ಯುವಕನೋರ್ವ ತನ್ನ ತಾಯಿ ಹಾಗು ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ

- Advertisement -
- Advertisement -

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಕೊಂಕೋಡಿ ಎಂಬಲ್ಲಿ ಕುಡಿತದ ಅಮಲಿನಲ್ಲಿ ವ್ಯಕ್ತಿಯೋರ್ವ ತನ್ನ ತಾಯಿ ಹಾಗೂ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಂಭಬಿಸಿದೆ. ಸಿರಿಲ್ ಪಿಂಟೋ ಹಲ್ಲೆ ನಡೆಸಿದ ಆರೋಪಿ. ಈತ ವಿಪರೀತ ಕುಡಿತದ ಚಟ ಹೊಂದಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಈತ ಮೊದಲು ತನ್ನ ಸಹೋದರ ಜಾನ್ ಪಿಂಟೋ ಅವರ ಮೇಲೆ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ ಹಲ್ಲೆಗೆ ಒಳಗಾದ ಜಾನ್ ಆಸ್ಪತ್ರೆಗೆ ದಾಖಲಾಗಿದ್ದು ಮರುದಿನ ಬೆಳಿಗ್ಗೆ ಸಿರಿಲ್ ತನ್ನ ತಾಯಿ ಫೆಲ್ಸಿ ಹಾಗೂ ಅನಾರೋಗ್ಯ ಪೀಡಿತನಾಗಿ ಮಲಗಿದಲ್ಲಿಯೇ ಇರುವ ಸಹೋದರ ಹೆನ್ರಿ ಪಿಂಟೋ ಮೇಲೆ ಕತ್ತಿಯಿಂದ ಗಂಭೀರ ಹಲ್ಲೆ ನಡೆಸಿದ್ದಾನೆ. ಇವರಿಬ್ಬರನ್ನೂ ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ‌. ಸಿರಿಲ್ ಪಿಂಟೋ ವಿಪರೀತ ಕುಡಿತದ ಚಟ ಹೊಂದಿದ್ದು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕುಡಿತದ ಅಮಲಿನಲ್ಲಿ ಈತ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!