Saturday, May 4, 2024
Homeಅಪರಾಧಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಅಕ್ರಮ ಚಿನ್ನ ಸಾಗಾಟ - ಮಹಿಳೆಯ ಒಳಉಡುಪಿನಲ್ಲಿತ್ತು 36.43 ಲಕ್ಷ ರೂ....

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಅಕ್ರಮ ಚಿನ್ನ ಸಾಗಾಟ – ಮಹಿಳೆಯ ಒಳಉಡುಪಿನಲ್ಲಿತ್ತು 36.43 ಲಕ್ಷ ರೂ. ಮೌಲ್ಯದ ಚಿನ್ನ

spot_img
- Advertisement -
- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಚಿನ್ನ ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ ಸುಮಾರು 36,43,270 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ .

ಆರೋಪಿ ಮಹಿಳೆಯನ್ನು ಕಾಸರಗೋಡು ಮೂಲದ ತಲಂಗರದವರು ಎಂದು ಗುರುತಿಸಲಾಗಿದೆ.ಡಿ.16 ರ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದು ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ತಪಾಸಣೆಗೊಳಪಡಿಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ

24 ಕ್ಯಾರೆಟ್ ನ 739 ಗ್ರಾಂ ಚಿನ್ನವನ್ನು ಗಮ್ ರೂಪದಲ್ಲಿ ಪ್ಲಾಸ್ಟಿಕ್ ಪೌಚ್ ಗೆ ತುಂಬಿಸಿ ಅದನ್ನು ಒಳಉಡುಪಿನ ಒಳಗೆ ಹೊಲಿದು ಜೋಡಿಸಿಲಾಗಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!