Friday, June 5, 2026
Homeಕರಾವಳಿಪುತ್ತೂರಿನಲ್ಲಿ ಬಿದಿರಿನ ಹಿಂಡಿನಲ್ಲಿ ವ್ಯಕ್ತಿಯ ಶವ ಪತ್ತೆ

ಪುತ್ತೂರಿನಲ್ಲಿ ಬಿದಿರಿನ ಹಿಂಡಿನಲ್ಲಿ ವ್ಯಕ್ತಿಯ ಶವ ಪತ್ತೆ

- Advertisement -
- Advertisement -

ಪುತ್ತೂರಿನಲ್ಲಿ ಬಿದಿರಿನ ಹಿಂಡಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಪುತ್ತೂರಿನ ಪಾಂಗಳಾಯಿ ಕಾಲುವೆ ಬಳಿಯಲ್ಲಿ ನಡೆದಿದೆ. ಮೃತದೇಹ ಮೇಲಕ್ಕೆತ್ತಿರುವ ಪುತ್ತೂರು ನಗರ ಪೊಲೀಸರು ಅದನ್ನು ಶವಗಾರಕ್ಕೆ ಸಾಗಿಸಿದ್ದಾರೆ.

ಪುತ್ತೂರು ಪಾಂಗಳಾಯಿ ಪರಿಸರದಲ್ಲಿ ಬಿದಿರಿನ ಹಿಂಡಿನಲ್ಲಿ ಮೃತ ದೇಹ ಸಿಲುಕಿ ಹಾಕಿಕೊಂಡಿತ್ತು. ಸ್ಥಳೀಯರು ಮೀನು ಹಿಡಿಯಲೆಂದು ತೋಡಿಗೆ ಹೋಗುವ ಸಂದರ್ಭದಲ್ಲಿ ದುರ್ನಾತ ಬಂದಿದ್ದು, ಹುಡುಕಾಟದ ವೇಳೆ ಯುವಕರಿಗೆ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತದೇಹ ಯಾರದ್ದು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!