Saturday, June 27, 2026
Homeಕರಾವಳಿಬೆಳ್ತಂಗಡಿ : ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳ್ತಂಗಡಿ : ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

- Advertisement -
- Advertisement -

ಬೆಳ್ತಂಗಡಿ : ಉಜಿರೆ ಗ್ರಾಮದ ನಾಗರಾಜ್ ಕಾಂಪೌಂಡ್ ನ ಶಂಕರ್ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಮೈಸೂರಿನಲ್ಲಿ ಹೊಟೇಲ್ ಹೊಂದಿರುವ ಉದ್ಯಮಿಯಾಗಿರುವ ಉಜಿರೆ ಗ್ರಾಮದ ನಾಗರಾಜ್ ಕಾಂಪೌಂಡ್ ನಿವಾಸಿ ಶಂಕರ್ ಶೆಟ್ಟಿ ಮತ್ತು ಕುಟುಂಬ ಮೈಸೂರಿನಲ್ಲಿ ವಾಸ್ತವ್ಯ ಇರುವುದು, ರಜೆ ಇರುವ ಸಂದರ್ಭ ಉಜಿರೆ ಮನೆಗೆ ಬಂದು ಹೋಗುತ್ತಿದ್ದರು.

ಭಾನುವಾರ (ಇಂದು) ಶಂಕರ್ ಶೆಟ್ಟಿ ಮನೆಯ ಕಾಂಪೌಂಡ್ ಒಳಗಿನಿಂದ ದುರ್ವಾಸನೆ ಬಂದಿದ್ದು, ಪಕ್ಕದ ಮನೆಯ ನಿವಾಸಿ ಶ್ರೀಧರ್ ಗೌಡ ಎಂಬವರು ಬಂದು ಸುತ್ತಮುತ್ತ ಪರಿಶೀಲನೆ ಮಾಡಿದ್ದಾರೆ ನಂತರ ಬಾವಿಯ ಒಳಗಡೆಯಿಂದ ತುಂಬ ದುರ್ವಾಸನೆ ಬಂದಿದ್ದು ಹೋಗಿ ನೋಡಿದಾಗ ವ್ಯಕ್ತಿಯೊಬ್ಬರ ಶವ ಕಂಡಿದ್ದಾರೆ.

ತಕ್ಷಣ ಮನೆಯ ಮಾಲೀಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ನಂತರ ಮುಳುಗು ತಜ್ಞರಾದ ಗಾಂಧಿನಗರದ ಶಿಯಾಬ್, ಸಂಜಯನಗರ ಇಸ್ಮಾಯಿಲ್,ಕುಂಟಿನಿ ರಝಕ್, ಕುಂಟಿನಿ ರಫೀಕ್, ಆಂಬುಲೆನ್ಸ್ ಚಾಲಕ ಜಲಿಲ್ ಬಾಬಾ ಅವರನ್ನು ಕರೆಸಿ ಶವ ಮೇಲಾಕ್ಕೆತ್ತಿದ್ದಾರೆ , ಶವ ಗಂಡಸಿನದ್ದಾಗಿದ್ದು ಬಲ ಕೈಯಲ್ಲಿ ‘ಮಂಜುಳಾ’ ಎಂಬುವುದಾಗಿ ಟ್ಯಾಟು ಹಾಕಿದ್ದಾರೆ, ಶವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಗಾರಕ್ಕೆ ಸಾಗಿಸಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!