Friday, May 17, 2024
Homeತಾಜಾ ಸುದ್ದಿಚಾರ್ಲಿ ಚಲನಚಿತ್ರಕ್ಕೆ ಇಂದಿನಿಂದ ರಾಜ್ಯದಲ್ಲಿ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ

ಚಾರ್ಲಿ ಚಲನಚಿತ್ರಕ್ಕೆ ಇಂದಿನಿಂದ ರಾಜ್ಯದಲ್ಲಿ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ

spot_img
- Advertisement -
- Advertisement -

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ಕನ್ನಡ ಚಲನಚಿತ್ರ 777 ಚಾರ್ಲಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಚಿತ್ರ ಪ್ರದರ್ಶನಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಇಂದಿನಿಂದ ಆರು ತಿಂಗಳ ಅವಧಿಗೆ ಶೇಕಡಾ 100 ರಷ್ಟು ಜಿಎಸ್ ಟಿ ವಿನಾಯಿತಿ ನೀಡಲಾಗಿದೆ. ಇನ್ ಬ್ರೀಡಿಂಗ್ ನಿಂದಾಗಿ ಶ್ವಾನಗಳ‌ ಸ್ವಾಸ್ಥದ ಮೇಲಾಗುವ ಪರಿಣಾಮ ಮತ್ತು ಪ್ರಾಣಿ ಹಿಂಸೆಯ ಸೂಕ್ಷ್ಮತೆಗಳನ್ನು ತಿಳಿಸುವ ಕಥಾ ಹಂದರ ಹೊಂದಿರುವ ಚಾರ್ಲಿ ಚಿತ್ರದ ಪ್ರದರ್ಶನಕ್ಕೆ ಶೇಕಡಾ 100 ರಷ್ಟು ತೆರಿಗೆ ವಿನಾಯಿತಿ ನೀಡುವಂತೆ ನಟ ರಕ್ಷಿತ್ ಶೆಟ್ಟಿ ಜೂನ್ 14 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಮನವಿಯನ್ನು ಪರಿಗಣಿಸಿ ತೆರಿಗೆ ವಿನಾಯಿತಿ ನೀಡುವಂತೆ ಸಿಎಂ ನಿರ್ದೇಶನದ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ‌ ಈ‌ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಎಂಬ ಬಾಲಿವುಡ್ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿತ್ತು.‌

- Advertisement -
spot_img

Latest News

error: Content is protected !!