Thursday, June 4, 2026
Homeಕರಾವಳಿಉಡುಪಿಉಡುಪಿ: ಬ್ರಹ್ಮಾವರದಲ್ಲಿ ನಸುಕಿನ ಜಾವ ಹೊತ್ತಿ ಉರಿದ ಕಾರು: ಕಾರಿನಲ್ಲಿತ್ತು ಜೋಡಿ ಮೃತದೇಹ

ಉಡುಪಿ: ಬ್ರಹ್ಮಾವರದಲ್ಲಿ ನಸುಕಿನ ಜಾವ ಹೊತ್ತಿ ಉರಿದ ಕಾರು: ಕಾರಿನಲ್ಲಿತ್ತು ಜೋಡಿ ಮೃತದೇಹ

- Advertisement -
- Advertisement -

ಉಡುಪಿ: ಇಲ್ಲಿನ ಮಂದಾರ್ತಿಯ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕೊತ್ತೂರು ಎಂಬ ನಿರ್ಜನ ಪ್ರದೇಶದಲ್ಲಿ ಸುಟ್ಟು ಹೋದ ಕಾರು ಪತ್ತೆಯಾಗಿದೆ. ಅಲ್ಲದೇ ಕಾರಿನೊಳಗೆ ಜೋಡಿ ಮೃತದೇಹ ಪತ್ತೆಯಾಗಿದೆ.

ಇಂದದು ನಸುಕಿನ ಜಾವ 3.30 ರವೇಳೆಗೆ ಕಾರು ಹೊತ್ತಿ ಉರಿಯುವುದನ್ನು ಗಮನಿಸಿದ ಸ್ಥಳೀಯರು ವಿದ್ಯುತ್ ಅವಘಡ ಸಂಭವಿಸಿರಬೇಕು ಅಂದುಕೊಂಡಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹಗಳೆರಡು ಪತ್ತೆಯಾಗಿದೆ. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!