Thursday, June 4, 2026
Homeಕರಾವಳಿಮಂಗಳೂರು: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

- Advertisement -
- Advertisement -

ಮಂಗಳೂರು:ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಜ್ಪೆ ಸೌಹಾರ್ದ ನಗರ ಕೋರ್ದಬ್ಬು ದೇವಸ್ಥಾನ ಬಳಿಯ ನಿವಾಸಿ ಕಿಶೋರ್ ಎಂಬವರ ಪತ್ನಿ ಭವ್ಯಶ್ರೀ (26) ಮತ್ತು ಅವರ ಎಂಟು ವರ್ಷದ ಹಾಗೂ ಎರಡೂವರೆ ವರ್ಷದ ಮಕ್ಕಳು ನಾಪತ್ತೆಯಾಗಿದ್ದಾರೆ.

ಭವ್ಯ ಅವರು ಮೇ17ರಂದು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಆಧಾರ್ ಕಾರ್ಡ್ ಮಾಡಿಸುವುದಾಗಿ ಹೇಳಿ ಮನೆಯಿಂದ ಹೋದವರು ಹಿಂದಿರುಗಿ ಬಂದಿಲ್ಲ ಎಂದು ಪತಿ ಕಿಶೋರ್ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಣೆಯಾದವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!