Wednesday, June 24, 2026
Homeಕರಾವಳಿಮಂಗಳೂರುಸ್ಕೂಟರ್ ನಲ್ಲಿ ಸಂಚರಿಸಿ ಬಿ.ಸಿ. ರೋಡ್-ಅಡ್ಡಹೊಳೆ ಚತುಷ್ಟಥ ಕಾಮಗಾರಿ ಅವ್ಯವಸ್ಥೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಸ್ಕೂಟರ್ ನಲ್ಲಿ ಸಂಚರಿಸಿ ಬಿ.ಸಿ. ರೋಡ್-ಅಡ್ಡಹೊಳೆ ಚತುಷ್ಟಥ ಕಾಮಗಾರಿ ಅವ್ಯವಸ್ಥೆ ಪರಿಶೀಲಿಸಿದ ಜಿಲ್ಲಾಧಿಕಾರಿ

- Advertisement -
- Advertisement -

ಬಂಟ್ವಾಳ: ಬಿ.ಸಿ.ರೋಡ್- ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಲ್ಲಿ ಮಳೆಯಿಂದಾಗಿ ಅವ್ಯವಸ್ಥೆ ಆಗಿರುವುದನ್ನು ಸ್ಚತ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸ್ಕೂಟರ್ ನಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.

ಚತುಷ್ಪಥ ರಸ್ತೆ ಕಾಮಗಾರಿ ಸ್ಥಳದಲ್ಲಿ ಮಳೆಯಿಂದ ಕೆಸರು ಉಂಟಾಗಿದ್ದು ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದ್ದು, ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಜಿಲ್ಲಾಧಿಕಾರಿ ಸಂಚಾರ ನಡೆಸಿದರು.

ಸಮಸ್ಯೆಯನ್ನು ಪರಿಹರಿಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ,ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮತ್ತು ಕೆಸರು ಇರುವ ಭಾಗಕ್ಕೆ ವೆಟ್ ಮಿಕ್ಸ್ ಹಾಕಲು ನಿರ್ದೇಶನ ನೀಡಿದರು.

ಅಲ್ಲದೇ, ಪಾದಚಾರಿಗಳು ದಾಟಲು ಕಾಲುದಾರಿ ನಿರ್ಮಾಣಕ್ಕೂ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಮುಲ್ಲೈ‌ ಮುಗಿಲನ್ ಸೂಚನೆ ನೀಡಿದರು.

ಏಳು ವರ್ಷಗಳ ಹಿಂದೆ ಆರಂಭಗೊಂಡಿದ್ದ ಚತುಷ್ಪಥ ರಸ್ತೆ ಕಾಮಗಾರಿ ಸ್ಥಗಿತಗೊಂಡು ಎರಡೂವರೆ ವರ್ಷಗಳ ಹಿಂದೆ ಪುನರಾರಂಭಗೊಂಡಿತ್ತು.

- Advertisement -

Latest News

error: Content is protected !!