Thursday, June 4, 2026
Homeಕರಾವಳಿಮಂಗಳೂರು ದಸರಾ ಪ್ರಯುಕ್ತ ದಸರಾ ದರ್ಶಿನಿ ಪ್ಯಾಕೇಜ್ ಟೂರ್ ಗೆ ಚಾಲನೆ

ಮಂಗಳೂರು ದಸರಾ ಪ್ರಯುಕ್ತ ದಸರಾ ದರ್ಶಿನಿ ಪ್ಯಾಕೇಜ್ ಟೂರ್ ಗೆ ಚಾಲನೆ

- Advertisement -
- Advertisement -

ಮಂಗಳೂರು: ಮಂಗಳೂರು ದಸರಾ ಪ್ರಯುಕ್ತ ಕರ್ನಾಟಕ ರಾಜ್ಯ ಸಾರಿಗೆ ನಿಗಮ ವತಿಯಿಂದ ಮಂಗಳೂರು ದಸರಾ ದರ್ಶಿನಿ ಪ್ಯಾಕೇಜ್ ಟೂರ್ ಗೆ ಚಾಲನೆ ನೀಡಲಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪ್ಯಾಕೇಜ್ ಟೂರ್ ಗೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.

ದಸರಾ ದರ್ಶಿನಿ ಪ್ಯಾಕೇಜ್ ಟೂರ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಮಂಗಳಾದೇವಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಗಳ ದರ್ಶನ ಮಾಡಬಹುದಾಗಿದೆ.

- Advertisement -

Latest News

error: Content is protected !!