Saturday, April 27, 2024
Homeಜ್ಯೋತಿಷ್ಯಮಂಗಳವಾರದ ರಾಶಿ ಭವಿಷ್ಯ: ಇಂದು‌ ಯಾವ ರಾಶಿಗೆ ಕಾದಿದೆ‌‌ ಶುಭ ಸುದ್ದಿ?

ಮಂಗಳವಾರದ ರಾಶಿ ಭವಿಷ್ಯ: ಇಂದು‌ ಯಾವ ರಾಶಿಗೆ ಕಾದಿದೆ‌‌ ಶುಭ ಸುದ್ದಿ?

spot_img
- Advertisement -
- Advertisement -

ಮೇಷ :ನಿಮ್ಮ ಕೆಲಸ ಕಾರ್ಯಗಳಿಗೆ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಬಹುದು.

ವೃಷಭ ರಾಶಿ: ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.

ಮಿಥುನ ರಾಶಿ : ಹೊಸ ವಾಹನ ಖರೀದಿಗೆ ಸಾಲಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಒದಗಿಬರಲಿದೆ. ಬ್ಯಾಂಕ್ ಅಧಿಕಾರಿಗಳಿಂದ ಸಹಾಯ ಆಗುತ್ತದೆ.

ಕರ್ಕಾಟಕ ರಾಶಿ: ವಿವಾಹ ವಯಸ್ಕರಿಗೆ ಸಂಬಂಧಿಕರ ಮೂಲಕ ಸೂಕ್ತ ಸಂಬಂಧ ಹುಡುಕಿಕೊಂಡು ಬರುವ ಅವಕಾಶ ಇದೆ.

ಸಿಂಹ ರಾಶಿ: ನಿಮಗೆ ಬರಬೇಕಾದ ಹಣ ಇದ್ದಲ್ಲಿ ಅದಕ್ಕೆ ಪ್ರಯತ್ನಿಸಿ. ಮಾತಿನ ಮೂಲಕ ಆದಾಯ ಬರುವ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ದಿನ ಇದಾಗಿರುತ್ತದೆ.

ಕನ್ಯಾ ರಾಶಿ: ನೀವಾಗಿಯೇ ತೆಗೆದುಕೊಂಡ ಜವಾಬ್ದಾರಿಗಳ ಕಾರಣದಿಂದಾಗಿ ಬಿಡುವೇ ಇಲ್ಲದಂತಾಗುತ್ತದೆ. ಅನಿರೀಕ್ಷಿತವಾಗಿ ಖರ್ಚುಗಳು ಬರಬಹುದು.

ತುಲಾ ರಾಶಿ: ಖರ್ಚಿನ ಪ್ರಮಾಣದಲ್ಲಿ ಜಾಸ್ತಿ ಆಗಲಿದೆ. ಕೋರ್ಟ್- ಕಚೇರಿ ವ್ಯಾಜ್ಯಗಳಿದ್ದಲ್ಲಿ ನಿಮಗೆ ಹಿನ್ನಡೆ ಆಗಬಹುದು. ಇತರರನ್ನು ನಂಬಿ, ಯಾವುದೇ ಹೂಡಿಕೆ ಮಾಡದಿರಿ.

ವೃಶ್ಚಿಕ ರಾಶಿ: ಬಡ್ತಿ, ವರ್ಗಾವಣೆ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಹಣಕಾಸು ಅನುಕೂಲ ಒದಗಿ ಬರಲಿದೆ.

ಧನಸ್ಸು ರಾಶಿ : ಉದ್ಯೋಗ ಸ್ಥಳದಲ್ಲಿ ಬದಲಾವಣೆ ನಿರೀಕ್ಷೆ ಮಾಡಬಹುದು. ನಯವಾದ ಮಾತಿನ ಮೂಲಕ ಕೆಲಸ ಮಾಡಿಸಿಕೊಳ್ಳಲಿದ್ದೀರಿ. ನಿಮ್ಮ ಹೊಂದಾಣಿಕೆ ಸ್ವಭಾವದಿಂದ ಅನುಕೂಲ ಆಗಲಿದೆ.

ಮಕರ ರಾಶಿ: ‌ತಂದೆ ಅಥವಾ ತಂದೆಗೆ ಸಮಾನರಾದವರ ಮೂಲಕ ಅನುಕೂಲ ಒದಗಿ ಬರಲಿದೆ. ಅದೃಷ್ಟದ ಬಲದಿಂದ ಆಸ್ತಿ ವ್ಯವಹಾರಗಳಲ್ಲಿ ಪ್ರಗತಿ ಆಗಲಿದೆ.

ಕುಂಭ ರಾಶಿ: ದೂರ ಪ್ರಯಾಣ ಮಾಡುವುದಿದ್ದಲ್ಲಿ ಮುಂದೂಡುವುದು ಉತ್ತಮ. ಏಕೆಂದರೆ ಅಪಘಾತ ಅಥವಾ ಸಣ್ಣ- ಪುಟ್ಟ ಸಮಸ್ಯೆಯಾದರೂ ಎದುರಾಗಬಹುದು.

ಮೀನ ರಾಶಿ : ಸಂಗಾತಿ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಪಾರ್ಟನರ್ ಷಿಪ್ ವ್ಯವಹಾರಗಳಲ್ಲಿ ಲಾಭ ಗಳಿಸುವ ಅವಕಾಶ ಇದೆ. ಪ್ರೇಮಿಗಳು ಕಿರು ಪ್ರವಾಸ ಕೈಗೊಳ್ಳುವಂಥ ಯೋಗ ಇದೆ.

- Advertisement -
spot_img

Latest News

error: Content is protected !!