Thursday, May 2, 2024
Homeತಾಜಾ ಸುದ್ದಿಮಂಗಳವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಈ ದಿನ ಮಂಗಳಕರವಾಗಿರಲಿದೆ?

ಮಂಗಳವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಈ ದಿನ ಮಂಗಳಕರವಾಗಿರಲಿದೆ?

spot_img
- Advertisement -
- Advertisement -

ಮೇಷ ರಾಶಿ
ಜೀವನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವಿರಿ. ದಿನದ ಅಂತ್ಯದಲ್ಲಿ ನೆಮ್ಮದಿಯ ಸಮಯ ಕಾಣುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದಿಲ್ಲ. ನಿಮ್ಮ ಬೇಸರತನ ಮನೆಯಲ್ಲಿ ತೊಂದರೆ ಉಂಟುಮಾಡುವ ಸಂಭವ ಎಚ್ಚರ. ವ್ಯಾಪಾರದಲ್ಲಿ ಅದೃಷ್ಟಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವದು. ಮನೆಯ ಜವಾಬ್ದಾರಿಗಳು ಹೆಚ್ಚುವವು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.
ಶುಭ ಸಂಖ್ಯೆ 6.

ವೃಷಭ ರಾಶಿ
ಮಕ್ಕಳ ಮೇಲಿದ್ದ ಅತಿಯಾದ ನಂಬಿಕೆಗೆ ಭಂಗ ಬರಲಿದೆ. ದೇವಿಗೆ ಪೂಜೆ ಸಲ್ಲಿಸಿದರೆ ಶುಭದಿನ. ನಿಮ್ಮ ಕಾಯಕ ನಿಷ್ಠೆ ಜೀವನದಲ್ಲಿ ಒಂದು ಶಿಸ್ತನ್ನು ರೂಢಿಸಿರುವುದು. ಕಂಕಣಭಾಗ್ಯ ದೊರೆಯಲಿದೆ. ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು.ಉದ್ಯೋಗದ ಸ್ಥಾನ ಬದಲಾವಣೆಯ ವಿಚಾರವಾಗಿ ಚಿಂತೆ ಇರುವದು.
ಶುಭ ಸಂಖ್ಯೆ 8.

ಮಿಥುನ ರಾಶಿ
ಉದರ ಸಂಬಂಧಿ ತೊಂದರೆ ಕಂಡು ಬರುವುದು. ಗುರುಗಳ ದರ್ಶನದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಸಾಮಾಜಿಕವಾಗಿ ವಿಶೇಷ ಸನ್ಮಾನಗಳು ನಡೆಯಲಿವೆ. ಅಡೆ-ತಡೆಯಿಲ್ಲದ ಖರ್ಚು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹಾನಿ ಮಾಡುವ ಸಂದರ್ಭ ಒದಗಿ ಬರುತ್ತದೆ. ಮಾತಿನಲ್ಲಿ ಮಿತಿಯಿರಲಿ. ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ.
ಶುಭ ಸಂಖ್ಯೆ 1.

ಕರ್ಕಾಟಕ ರಾಶಿ
ಬಹುತೇಕ ದಿನಗಳಿಂದ ಕಾಣುವ ಕನಸು ಈಡೇರುವ ದಿನವಾಗಿದೆ. ಉತ್ತಮವಾಗಿರುತ್ತವೆ. ಧನಾತ್ಮಕ ಚಿಂತನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು. ಆರೋಗ್ಯ ಉತ್ತಮವಾಗಿರುವುದು. ಬಂಧುಗಳಿಂದ ಸುವಾರ್ತೆ ಕೇಳುವಿರಿ. ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ. ವ್ಯಾಪಾರ ವೃದ್ಧಿಯಾಗುವದು. ಆರ್ಥಿಕ ಸಂಕಷ್ಟ ದೂರಾಗುವದು.
ಶುಭ ಸಂಖ್ಯೆ 7.

ಸಿಂಹ ರಾಶಿ
ಉದರ ಶೂಲೆಗೆ ಸಂಬಂಧಪಟ್ಟಂತೆ ತೊಂದರೆ ಎದುರಾಗುವ ಸಂಭವ. ಸೂಕ್ತ ವೈದ್ಯರ ಸಲಹೆ ಪಡೆಯಿರಿ. ಇಂದಿನ ಸೋಲು ನಾಳಿನ ಗೆಲುವು ಎಂಬ ವಿಶ್ವಾಸದಿಂದ ಮುನ್ನೆಡೆದಲ್ಲಿ ಒಳಿತಾಗುವುದು. ಮಹತ್ತರ ಕಾರ್ಯಗಳನ್ನು ಮುಂದೂಡಿ. ಮಡದಿಯ ಕೆಲವು ವಿಷಯದಿಂದ ಗಲಾಟೆಯು ಎದುರಾಗಬಹುದು. ನನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವದು. ಮಾನಸಿಕ ಉತ್ಸಾಹ ಕಂಡುಬರುವದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವದು. ಕಾರಣಾಂತರ ಅಧಿಕ ಖರ್ಚುಬರಬಹುದು.
ಶುಭ ಸಂಖ್ಯೆ 6.

ಕನ್ಯಾ ರಾಶಿ
ಸ್ಪಷ್ಟ ನಿಲುವಿನಿಂದಾಗಿ ವಿಶೇಷ ಸಾಧನೆಯ ಗರಿಮೆ ನಿಮ್ಮದಾಗಿದೆ, ಕ್ರೀಡಾಪಟುಗಳಿಗೆ ಹರ್ಷ. ಕಷ್ಟದಲ್ಲಿರುವವರಿಗೆ ನೆರವು ನೀಡಬೇಕಾದ ಸಂದರ್ಭ ಒದಗಿ ಬಂದೀತು. ಕುಟುಂಬದ ವಾತಾವರಣ ಮಿಶ್ರ ಫಲಿತಾಂಶ. ಧನ ಅಪವ್ಯಯವಾಗುವ ಲಕ್ಷಣಗಳಿವೆ ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವದು. ಶ್ರಮಿಕವರ್ಗಕ್ಕೆ ಉನ್ನತಿ ಇರುವದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣ ಪರಿಹಾರವಾಗುವದು.
ಶುಭ ಸಂಖ್ಯೆ 5.

ತುಲಾ ರಾಶಿ
ವ್ಯಯಕ್ತಿಕ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿ ಮಾಡುವುದು. ರಾಜಕೀಯದಲ್ಲಿರುವವರು ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಾದೀತು. ಮಧ್ಯಸ್ಥಿಕೆಯಿಂದ ತೊಂದರೆ ಎದುರಾಗುವ ಸಂಭವ ಎಚ್ಚರ ಅಗತ್ಯ. ದೈಹಿಕ ಸಮಸ್ಯೆಗಳು ಉಲ್ಬಣವಾಗಿ ಕೆಲಸಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಕಾರ್ಯ ವಿರೋಧ ಇರುವದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ.
ಶುಭ ಸಂಖ್ಯೆ 3.

ವೃಶ್ಚಿಕ ರಾಶಿ
ನೆರೆ ಹೊರೆಯವರೊಂದಿಗೆ ಹಿತವಾದ ಮಾತುಕತೆ. ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಪ್ರೀತಿಯಿಂದ ಜನರನ್ನು ಸೆಳೆಯುವ ಪ್ರಯತ್ನ ಮಾಡಿ. ವಾಹನದಲ್ಲಿ ಎಚ್ಚರ ವಹಿಸಬೇಕು. ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಅಗೌರವ ಆಗುವ ಸಂಭವ ಇರುವದರಿಂದ ಸೂಕ್ಷ್ಮವಾಗಿರುವದು ಉತ್ತಮ. ಹೊಸ ಯೋಜನೆಗಳಿಗೆ ಚಾಲನೆ ದೊರೆಯುವದು.
ಶುಭ ಸಂಖ್ಯೆ 2.

ಧನಸ್ಸು ರಾಶಿ
ಸಹಕಾರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗುತ್ತೀರಿ. ಸ್ವಯಂ ಶಕ್ತಿ, ನಂಬಿಕೆ, ವಿಶ್ವಾಸಗಳನ್ನು ನಂಬಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ, ಜಾಣ್ಮೆಯಿಂದಾಗಿ ಅಸಾಧ್ಯವಾದ ಸಾಧನೆ ಮಾಡಲಿದ್ದೀರಿ. ಪ್ರೀತಿ ಪ್ರೇಮದ ವಿಷಯದಿಂದ ಮನೆಯಿಂದ ಜಗಳ. ತಾಪತ್ರಯಗಳೆಲ್ಲ ದೂರವಾಗಿದ್ದು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ವ್ಯಾಪಾರಾದಿ ಉದ್ಯಮಗಳು ಇಷ್ಟದಂತೆ ನಡೆಯುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳಿಗೂ ಭಯ ತೋರಿದರೂ ಹಾನಿಯಿಲ್ಲ.
ಶುಭ ಸಂಖ್ಯೆ 4.

ಮಕರ ರಾಶಿ
ಒಳ್ಳೆಯ ಚಿಂತನೆಯಿಂದಾಗಿ ಉತ್ತಮ ಮನಃಸ್ಥಿತಿಯನ್ನು ಕಾಯ್ದುಕೊಳ್ಳುವಿರಿ. ಶಕ್ತಾನುಸಾರ ಕೆಲಸ ಕಾರ್ಯಗಳನ್ನು ನಿರಾಶರಾಗದೆ, ಸಾಧಿಸಲಿದ್ದೀರಿ. ವಸ್ತ್ರಭೂಷಣ ವೈಭವ ಪ್ರಾಪ್ತಿ. ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗಿ ಶುಭ. ವ್ಯವಹಾರಿಕ ಏಳ್ಗೆ ಇರುವದು. ದೂರ ಪ್ರಯಾಣದ ಸಂಭವ. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ.ವಿವಿಧ ಸೌಭಾಗ್ಯಪ್ರಾಪ್ತಿ. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ವಾಹನ, ಮಶಿನರಿಗಳಿಂದ ತೊಂದರೆ.
ಶುಭ ಸಂಖ್ಯೆ 9.

ಕುಂಭ ರಾಶಿ
ವಿದೇಶ ಗಮನ ಸೆಳೆಯುವ ಆಸಕ್ತಿಯ ವಿಷಯ ಉಂಟಾಗುವ ಸಂಭವ. ಉದ್ಯೋಗದಲ್ಲಿ ಹೆಚ್ಚಿನ ಭಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ ಇದೆ ಸದ್ಯದಲ್ಲೇ ಪರಿಹಾರ. ಕುಟುಂಬದವರಿಂದ ತೊಂದರೆ ಎದುರಾಗುವ ಸಂಭವ ಎಚ್ಚರ. ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವದು. ವಾದ-ವಿವಾದ, ಹಠಸಾಧನೆ ಬೇಡ.
ಶುಭ ಸಂಖ್ಯೆ 5.

ಮೀನಾ ರಾಶಿ
ಹೃದಯ ರೋಗ ಶಮನ, ವಿವಿಧ ಆಪತ್ತಿನಿಂದ ಪಾರಾಗುವ ವಿಚಾರ. ಮಡದಿ ಮಕ್ಕಳಿಂದ ಶುಭವಿದೆ. ವಾಹನ ಖರೀದಿಯ ಬಗ್ಗೆ ಚಿಂತೆ ಮಾಡಬೇಡಿ. ಸಂಗಾತಿಯ ಭೇಟಿ ಮದುವೆಯ ವಿಚಾರ ಕಂಕಣಭಾಗ್ಯ ಒದಗಿ ಬರುವ ಭಾಗ್ಯ. ಆಗುವುದೆಲ್ಲ ಒಳಿತೆಂಬ ಭಾವನೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರದ ನೆಲೆ ದೊರಕಿ ಹರ್ಷ. ಮಹಿಳೆಯರಿಗೆ ಮನೆಯಲ್ಲಿನ ಆಂತರಿಕ ವಿರಸ ನೀಗಿ ಸೌಹಾರ್ದತೆ. ನೂತನ ವಿವಾದ ಹುಟ್ಟುಹಾಕದ ಹಾಗೆ ತಾಳ್ಮೆಯಡಿ ವರ್ತನೆ.
ಶುಭ ಸಂಖ್ಯೆ 5

- Advertisement -
spot_img

Latest News

error: Content is protected !!