Sunday, July 12, 2026
Homeಕರಾವಳಿಬೆಳ್ತಂಗಡಿ: ತಂದೆಯನ್ನೇ ಬಡಿಗೆಯಲ್ಲಿ ಬಡಿದು ಕೊಂದ ಪಾತಕಿ ಮಗ

ಬೆಳ್ತಂಗಡಿ: ತಂದೆಯನ್ನೇ ಬಡಿಗೆಯಲ್ಲಿ ಬಡಿದು ಕೊಂದ ಪಾತಕಿ ಮಗ

- Advertisement -
- Advertisement -

ಬೆಳ್ತಂಗಡಿ: ತಂದೆಯನ್ನು ಮಗನೇ ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೋಟ್ಟು ಎಂಬಲ್ಲಿ ನಡೆದಿದೆ.

ಶ್ರೀಧರ್ ಕೊಲೆಯಾದ ವ್ಯಕ್ತಿಯಾಗಿದ್ದು, ಮೃತ ಶ್ರೀಧರ್ ರ ಪುತ್ರ ಹರೀಶ್ ಎಂಬಾತ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮೃತ ಶ್ರೀಧರ್ ಗೆ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳಿದ್ದಾರೆ.

ಸಂಸಾರ ಕಲಹವೇ ಕೊಲೆಗೆ ಮೂಲ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!