Thursday, April 25, 2024
Homeಜ್ಯೋತಿಷ್ಯಶುಕ್ರವಾರದ ದಿನಭವಿಷ್ಯ: ಈ ರಾಶಿಯವರು ಮಿತ್ರರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ

ಶುಕ್ರವಾರದ ದಿನಭವಿಷ್ಯ: ಈ ರಾಶಿಯವರು ಮಿತ್ರರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ

spot_img
- Advertisement -
- Advertisement -

ಮೇಷ ರಾಶಿ
ವ್ಯಾಪಾರ-ವ್ಯವಹಾರಸ್ಥರಿಗೆ ನಿರೀಕ್ಷೆಯಂತೆ ಆದಾಯ ಒದಗಿ ಬರುವುದು. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುವುದು. ಪ್ರಯಾಣದಲ್ಲಿ ಎಚ್ಚರ. ಲಕ್ಷ್ಮೀನಾರಸಿಂಹ ದೇವರನ್ನು ಸ್ಮರಿಸಿರಿ. ಅಪಮಾನ, ಅಪವಾದದಂತಹ ಸಮಸ್ಸೆಗೆ ಸಿಲುಕದಂತೆ ಜಾಗರೂಕರಾಗಿರಿ. ಈ ಸಮಯದಲ್ಲಿ ಮಾತನಾಡುವ ಬದಲು ಮಾತು ಕೇಳುವದು ಉತ್ತಮ. ಮಕ್ಕಳು ಶಾಲಾ ಕಾಲೇಜುಗಳಲ್ಲಿ ಸಾಧನೆ ತೋರುವರು.
ಶುಭ ಸಂಖ್ಯೆ: 7

ವೃಷಭ ರಾಶಿ
ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ಪಡೆಯಲಿದ್ದೀರಿ. ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ ಆಗುವ ಸಾಧ್ಯತೆ ಇರುತ್ತದೆ. ಮತ್ತೊಬ್ಬರ ವ್ಯಾಪಾರಕ್ಕೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕಿಕೊಳ್ಳುವಿರಿ. ಕೃಷಿಮೂಲದ ಲಾಭ ದೊರೆಯುವುದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೇ ಸ್ವಂತ ಬಲದಿಂದ ಕೆಲಸ ನಿರ್ವಹಿಸುವಿರಿ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ.
ಶುಭ ಸಂಖ್ಯೆ: 3

ಮಿಥುನ ರಾಶಿ
ಮಿತ್ರರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದ ಇರುವುದು ಒಳ್ಳೆಯದು. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಬೇಡ. ನಿಮ್ಮ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಿ. ಹಿರಿಯರ ಸಲಹೆ ಸಕಾಲಕ್ಕೆ ದೊರೆಯುವುದು. ವಿಧ್ಯಾಭ್ಯಾಸ ತೊಳಲಾಟ ಇರುತ್ತದೆ. ಹಳೆಯ ಸಾಲ ಮರುಪಾವತಿಯಾಗುವುದು. ಬೇಡವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಭವವಿದೆ. ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಎದುರಾಡುವ ಸಂಭವವಿದೆ.
ಶುಭ ಸಂಖ್ಯೆ: 6

ಕರ್ಕಾಟಕ ರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಮಕ್ಕಳ ನಡವಳಿಕೆ ಮನೆಯಲ್ಲಿ ಮುಜುಗರದ ಪ್ರಸಂಗವನ್ನು ತರುವುದು. ಆರೋಗ್ಯದ ಕಡೆ ಗಮನ ನೀಡಿ. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವುದು.
ಶುಭ ಸಂಖ್ಯೆ: 4

ಸಿಂಹ ರಾಶಿ
ನಿಮ್ಮ ಉದಾಸೀನ ಪ್ರವೃತ್ತಿಯಿಂದಾಗಿ ಆರೋಗ್ಯದಲ್ಲಿ ಅಡ್ಡ ಪರಿಣಾಮ ಎದುರಿಸಬೇಕಾಗುವುದು. ಕೂಡಲೇ ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ. ಆದಷ್ಟು ನಿಮ್ಮ ಪಾಡಿಗೆ ನೀವಿರುವುದು ಎಲ್ಲಾ ದೃಷ್ಟಿಯಿಂದ ಹಿತಕರ. ಪರರ ಚಿಂತೆ ಪರದಾಡುವಂತೆ ಮಾಡುವುದು. ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ.
ಶುಭ ಸಂಖ್ಯೆ:8

ಕನ್ಯಾ ರಾಶಿ
ಬಂಧುಗಳ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಲಿದೆ. ಊಟೋಪಚಾರದಲ್ಲಿ ಅಜೀರ್ಣದ ಸಮಸ್ಯೆಗಳು ಕಾಣಬಹುದು. ಯಾರಾದರೂ ಸಲಹೆ ಕೇಳಿದಲ್ಲಿ ಮಾತ್ರ ಸಹಕರಿಸಿರಿ. ಹಣಕಾಸಿನ ವ್ಯವಹಾರ ಬೇಡ. ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ.
ಶುಭ ಸಂಖ್ಯೆ: 5

ತುಲಾ ರಾಶಿ
ಗ್ರಹಸ್ಥಿತಿಗಳು ಸರಿಯಿಲ್ಲದ ಕಾರಣ ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ದುಷ್ಟ ಚಟಗಳಿಗೆ ದಾಸರಾಗುವ ಸಂಭವವಿರುತ್ತದೆ. ಆದಷ್ಟು ಮನಸ್ಸಿಗೆ ಸಾಂತ್ವನ ನೀಡಿ. ದೇವತಾ ಆರಾಧನೆ, ಯೋಗಾಭ್ಯಾಸ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಖಿನ್ನತೆ ದೂರವಾಗುವುದು. ಸಹೋದ್ಯೋಗಿಗಳೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅಪೂರ್ಣ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಮೋಸಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ.
ಶುಭ ಸಂಖ್ಯೆ: 2

ವೃಶ್ಚಿಕ ರಾಶಿ
ರಾತ್ರಿ ಆದ ಮೇಲೆ ಬೆಳಕು ಬರಲೇಬೇಕು. ಹಾಗಾಗಿ ಜೀವನದಲ್ಲಿ ನಿರಾಶೆ ಹೊಂದದಿರಿ. ಗುರುವಿನ ಶುಭ ಆಶೀರ್ವಾದ ಪಡೆಯಿರಿ. ಮಾತುಗಳನ್ನು ಆಡುವಾಗ ಎಚ್ಚರದಿಂದಿರಿ. ನೆರೆಹೊರೆಯವರೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಿ. ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ.
ಶುಭ ಸಂಖ್ಯೆ: 1

ಧನಸ್ಸು ರಾಶಿ
ಸೋದರಿಯರು ನಿಮಗೆ ಉತ್ತಮ ಸಲಹೆಗಳನ್ನು ನೀಡುವರು. ಅವನ್ನು ಸ್ವೀಕರಿಸುವುದರಿಂದ ಜೀವನದಲ್ಲಿ ಅಧಿಕ ಯಶಸ್ಸನ್ನು ಹೊಂದುವಿರಿ. ಮನೆ ಕಟ್ಟುವ ಅಥವಾ ಜಾಗ ಖರೀದಿಸುವ ಬಗ್ಗೆ ಒಂದು ನಿರ್ಧಾರಕ್ಕೆ ಬರುವಿರಿ. ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲಾ ಇಷ್ಟದಂತೆ ನಡೆಯುತ್ತದೆ. ಹಲವು ರೀತಿಯಿಂದ ಧನಾಗಮನ ತೋರಿಬರುತ್ತದೆ. ಐಶ್ವರ್ಯ, ಮುಟ್ಟಿದ್ದು ಚಿನ್ನವಾಗುವ ಕಾಲ. ಸ್ಥಿರಾಸ್ತಿ ಪ್ರಾಪ್ತಿ. ಅಲ್ಪ ಅನಾರೋಗ್ಯ ತೋರಿದರೂ ಕ್ಷಣಿಕವೆನ್ನಬಹುದು.
ಶುಭ ಸಂಖ್ಯೆ: 4

ಮಕರ ರಾಶಿ
ನಿಮ್ಮ ನಿರ್ಧಾರ ಫಲಪ್ರದವಾಗಲು ಭೂ ವರಾಹಸ್ವಾಮಿಯನ್ನು ಪ್ರಾರ್ಥಿಸಿ. ಸೋದರನೊಂದಿಗೆ ಉತ್ತಮ ಸೌಹಾರ್ದತೆಯಿಂದ ನಡೆದುಕೊಂಡಲ್ಲಿ ಕೆಲವು ವಿಚಾರಗಳಲ್ಲಿ ಸುಲಭವಾಗಿ ಪರಿಹಾರ ದೊರೆಯುವುದು. ನವ ವಿವಾಹಿತರಿಗೆ ಸಂತಾನಭಾಗ್ಯ ದೊರೆಯಲಿದೆ. ಅನಿರೀಕ್ಷಿತ ಸಂಚಾರ ಒದಗಿಬಂದರೂ ತೃಪ್ತಿದಾಯಕವೆನ್ನಬಹುದು. ವ್ಯಾಪಾರಾದಿ ಉದ್ಯಮಗಳಲ್ಲಿ ಅಪೇಕಿಸಿದಂತೆ ಪ್ರಗತಿ. ಲಾಭ ತೋರಿಬರುತ್ತದೆ. ಹೊಸದಾದ ಆಲೋಚನಾ ಸಿದ್ಧಿ. ವಿಪರೀತ ಖರ್ಚು.
ಶುಭ ಸಂಖ್ಯೆ: 5

ಕುಂಭ ರಾಶಿ
ಕೆಲಸ ಕಾರ್ಯಗಳಲ್ಲಿ ಮಂದಪ್ರಗತಿ ಉಂಟಾಗುವುದು. ಆದರೆ ಹೆಚ್ಚಿನ ತೊಂದರೆಯಿಲ್ಲ ಮತ್ತು ವ್ಯವಹಾರದಲ್ಲಿ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ. ವಿವಾಹಿತ ಮಗಳಿಂದ ಶುಭ ಸಮಾಚಾರ ಕೇಳುವಿರಿ. ಹೊಸ ಯೋಜನೆಗಳು ಬೇಡ. ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವುದು. ಕೊಟ್ಟ ಸಾಲ ಮರುಪಾವತಿ ಆಗಲಾರದು, ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ.
ಶುಭ ಸಂಖ್ಯೆ: 7

ಮೀನಾ ರಾಶಿ
ಆರ್ಥಿಕ ದೃಢತೆ ನಿಮ್ಮಲ್ಲಿ ಧೈರ್ಯ ತುಂಬುವುದು. ವಾಹನ ಖರೀದಿ ಸದ್ಯಕ್ಕೆ ಬೇಡ. ಅತ್ಯವಸರದಲ್ಲಿ ಯಾವುದೇ ಕಾರ್ಯಗಳನ್ನು ಕೈಗೊಳ್ಳಬೇಡಿ. ಮಿತ್ರರು ಸಕಾಲದಲ್ಲಿ ಕೊಡುವ ಸಲಹೆಗಳನ್ನು ಅಲಕ್ಷಿಸಬೇಡಿ. ಬಹುಜನರ ಪ್ರಶಂಸೆಗೆ ಪಾತ್ರವಾಗುವ ಆಡಳಿತಾತ್ಮಕ ನಿರ್ಧಾರ. ಇದ್ದಕ್ಕಿದಂತೆ ಶುಭಕರ ಒಲವು. ಸಲ್ಲುವ ವಿಚಾರದಲ್ಲಿ ಕುಟುಂಬದ ಒಗ್ಗಟ್ಟು ವೃದ್ಧಿ. ಆರ್ಥಿಕಾನೂಕೂಲದಿಂದ ಸರಳ ವ್ಯವಹಾರ. ಹೆಂಗಳೆಯರದು ಮೌನವಾದ ಕೆಲಸ. ಆದರೆ ಪರಿಣಾಮ ಜಾಸ್ತಿ.
ಶುಭ ಸಂಖ್ಯೆ: 9

- Advertisement -
spot_img

Latest News

error: Content is protected !!