Friday, April 26, 2024
Homeಜ್ಯೋತಿಷ್ಯಸೋಮವಾರದ ರಾಶಿಭವಿಷ್ಯ: ವಾರದ ಮೊದಲ ದಿನ ಯಾರಿಗೆ ಶುಭವಾಗಲಿದೆ?

ಸೋಮವಾರದ ರಾಶಿಭವಿಷ್ಯ: ವಾರದ ಮೊದಲ ದಿನ ಯಾರಿಗೆ ಶುಭವಾಗಲಿದೆ?

spot_img
- Advertisement -
- Advertisement -

ಮೇಷ:
ಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವುದು.
ಶುಭ ಸಂಖ್ಯೆ: 9

ವೃಷಭ:
ವ್ಯಾಪಾರದಲ್ಲಿ ಅದೃಷ್ಟಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಮನೆಯ ಜವಾಬ್ದಾರಿಗಳು ಹೆಚ್ಚುವವು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.
ಶುಭ ಸಂಖ್ಯೆ: 1

ಮಿಥುನ:
ಯೋಜನೆಗಳಿಗೆ ಪೂರ್ವ ತಯಾರಿ ಮಾಡುವ ಅಗತ್ಯತೆ ಕಂಡುಬರುವುದು. ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವದು ಒಳಿತು.
ಶುಭ ಸಂಖ್ಯೆ: 6

ಕರ್ಕ:
ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು.ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು.
ಶುಭ ಸಂಖ್ಯೆ: 3

ಸಿಂಹ:
ಧನಮದಕ್ಕಿಂತ ವಿದ್ಯಾಮದ ಅಪಾಯಕಾರಿ ಆದರಿಂದ ತೊಂದರೆ ಆಗುವ ಸಾಧ್ಯತೆ ಇದೆ ವಿನಯದಿಂದ ವರ್ತಿಸಿರಿ. ಅಕಾಲಿಕ ಒತ್ತಡಗಳಿಂದ ಕಾರ್ಯಹಾನಿ. ಪ್ರೇಮಿಗಳಿಗೆ ಅಪೇಕ್ಷೆಯಂತೆ ಕಂಕಣ ಬಲ ಕೂಡಿಬರುವುದು.
ಶುಭ ಸಂಖ್ಯೆ: 8

ಕನ್ಯಾ:
ಚಂಚಲಚಿತ್ತದಿಂದ ಕಾರ್ಯಹಾನಿಯಾಗುವ ಲಕ್ಷಣಗಳಿವೆ. ಆಸ್ತಿ ಸಂಬಂದಿತ ಕ್ರಯವಿಕ್ರಯ ವ್ಯವಹಾರಗಳು ಕುದುರುವವು. ಅನವಶ್ಯಕ ಮಾತಿನಿಂದ ಇಕ್ಕಟ್ಟಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ತಜ್ಞರ ಸಹಾಯ ಪಡೆಯಿರಿ.
ಶುಭ ಸಂಖ್ಯೆ: 5

ತುಲಾ:
ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಅನಿವಾರ್ಯ ಕೆಲಸಗಳಿಗೆ ಅಲೆದಾಟ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು.
ಶುಭ ಸಂಖ್ಯೆ: 4

ವೃಶ್ಚಿಕ:
ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯಪ್ರವೃತ್ತಿಯು ಉತ್ತಮ ಫಲಕೊಡುವುದು. ಹಳೆಯ ಬಾಕಿ ವಸೂಲಾಗುವುದು. ವ್ಯಾಜ್ಯಗಳು ಅಂತ್ಯಕಾಣುವವು. ಗ್ರಹ ಸೌಖ್ಯವಿರುವುದು.
ಶುಭ ಸಂಖ್ಯೆ: 7

ಧನು:
ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು.
ಶುಭ ಸಂಖ್ಯೆ: 2

ಮಕರ:
ಧನಾರ್ಜನೆಯ ಮಾರ್ಗವು ಶ್ರೇಷ್ಠ ಮಟ್ಟದಲ್ಲಿದ್ದು, ಐಶ್ವರ್ಯ ಸಮೃದ್ಧಿಯಾಗುತ್ತದೆ. ಸಂಸಾರಿಕ ದೃಷ್ಟಿಯಲ್ಲೂ ಸುಖ, ಸಂಭ್ರಮಗಳಿದ್ದು ತೃಪ್ತಿ ಲಭಿಸಿದರೂ ಶತ್ರುಜನರ ಪೀಡೆ ಅಧಿಕವಾಗುತ್ತದೆ. ಅನಿವಾರ್ಯ ಪ್ರವಾಸ ಸಾಧ್ಯತೆ ಇದೆ.
ಶುಭ ಸಂಖ್ಯೆ: 8

ಕುಂಭ:
ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿಬಂದು, ದೇಹಾಲಸ್ಯವು ತಲೆ ದೋರುವುದು, ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ.
ಶುಭ ಸಂಖ್ಯೆ: 3

ಮೀನ:
ಮಿತ್ರರ ಸಕಾರಾತ್ಮಕ ಧೋರಣೆಯಿಂದ ವ್ಯವಹಾರಿಕ ಅಭಿವೃದ್ಧಿ ಕಂಡು ಬರುವುದು.ಕುಟುಂಬದ ಜವಾಬ್ದಾರಿ ಹೆಚ್ಚುವುದು. ಮಕ್ಕಳ ವಿದ್ಯಾಬ್ಯಾಸ ಹಾಗೂ ಆರೋಗ್ಯದ ಚಿಂತೆ ಕಂಡುಬರುವುದು. ನಿರ್ಲಕ್ಷತೆ, ಕೆಲಸ ಮುಂದೂಡುವ ಸ್ವಭಾವದಿಂದ ಹಾನಿ ಸಂಭವ.
ಶುಭ ಸಂಖ್ಯೆ: 4

- Advertisement -
spot_img

Latest News

error: Content is protected !!