Thursday, June 4, 2026
Homeತಾಜಾ ಸುದ್ದಿರವಿಕೆ ಖರೀದಿಗೆ ಹೋಗಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯೆಯ ಪರ್ಸ್ ಎಗರಿಸಿದ ಖದೀಮರು..!

ರವಿಕೆ ಖರೀದಿಗೆ ಹೋಗಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯೆಯ ಪರ್ಸ್ ಎಗರಿಸಿದ ಖದೀಮರು..!

- Advertisement -
- Advertisement -

ಬೆಂಗಳೂರು: ಬಟ್ಟೆಯಂಗಡಿಗೆ ರವಿಕೆ ಖರೀದಿಸಲು ಹೋಗಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿಯ ಪರ್ಸ್ ನ್ನು ಕಳ್ಳರು ಎಗರಿಸಿರುವ ಘಟನೆ ನಗರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ನಡೆದಿದೆ.

ಭಾರತಿ ಶೆಟ್ಟಿಯವರು ರವಿಕೆ ಖರೀದಿಸಲು ಕಮರ್ಷಿಯಲ್ ಸ್ಟ್ರೀಟ್ ಮೇನ್ ಗಾರ್ಡ್ ಕ್ರಾಸ್ ರಸ್ತೆಯಲ್ಲಿರುವ ಸಫಿನಾ ಪ್ಲಾಜಾದಲ್ಲಿರುವ ಕಾಂಚನಾ ಅಂಗಡಿಗೆ ತೆರಳಿದ್ದರು. ರವಿಕೆ ನೋಡಲು ಕೈಯಲ್ಲಿದ್ದ ಪರ್ಸ್‌ನ್ನು ಟೇಬಲ್ ಮೇಲಿಟ್ಟು ಆಯ್ಕೆ ಮಾಡುತ್ತಿದ್ದರು. ಕೊನೆಗೆ ಯಾವುದು ಇಷ್ಟ ಆಗದ ಕಾರಣ ಅಂಗಡಿಯಿಂದ ಹಿಂತಿರುಗಿದ್ದಾರೆ. ಸ್ವಲ್ಪ ಸಮಯದ ನಂತರ ಪರ್ಸ್ ಇಲ್ಲದೆ ಇರುವುದು ಅರಿವಿಗೆ ಬಂದು ತಕ್ಷಣ ಅಂಗಡಿಗೆ ಹೋಗಿ ನೋಡಿದಾಗ ಟೇಬಲ್ ಮೇಲೆ ಪರ್ಸ್ ಇರಲಿಲ್ಲ.

ಈ ಬಗ್ಗೆ ಅಂಗಡಿ ಸಿಬ್ಬಂದಿಯನ್ನು ಕೇಳಿದಾಗ ಸಾಕಷ್ಟು ಗ್ರಾಹಕರು ಅಂಗಡಿಗೆ ಬರುತ್ತಾರೆ. ಯಾರು ತೆಗೆದುಕೊಂಡು ಹೋಗಿರುತ್ತಾರೆ. ಗೊತ್ತಾಗುವುದಿಲ್ಲ ಎಂದು ಉತ್ತರಿಸಿದ್ದಾರೆ.

ಕಳವಾಗಿರುವ ಪರ್ಸ್‌ನಲ್ಲಿ 25 ಸಾವಿರ ರೂ., ಎಸ್‌ಬಿಐ, ಕೆನರಾ ಬ್ಯಾಂಕ್ ಎಟಿಎಂ, ಪಾನ್ ಕಾರ್ಡ್, ಎಂಎಲ್‌ಸಿ ಐಡಿ ಕಾರ್ಡ್ ಇದ್ದವು. ಹಾಗಾಗಿ ಕಳವಾಗಿರುವ ಪರ್ಸ್‌ನ್ನು ಪತ್ತೆಹಚ್ಚಿ ಕೊಡಬೇಕೆಂದು’ ಭಾರತಿ ಶೆಟ್ಟಿ ತಮ್ಮ ಆಪ್ತ ಸಹಾಯಕಿ ಶಶಿಕಲಾ ಮೂಲಕ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!