Sunday, June 7, 2026
Homeಮನರಂಜನೆನೇಣಿಗೆ ಶರಣಾದ ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ

ನೇಣಿಗೆ ಶರಣಾದ ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ

- Advertisement -
- Advertisement -

ಮಧ್ಯಪ್ರದೇಶದ ಇಂಧೋರ್ ನಲ್ಲಿ ಟಿವಿ ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಲಾಕ್‌ಡೌನ್‌ನಲ್ಲಿ ಪ್ರೇಕ್ಷಾಗೆ ಕೆಲಸ ಸಿಕ್ಕಿರಲಿಲ್ಲ. ಇದ್ರಿಂದ ನಿರಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮನೆಯವರು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇಂದೋರ್‌ನ ಭಜರಂಗ್ ನಗರದಲ್ಲಿ ನಡೆದಿದೆ. ಪ್ರೇಕ್ಷಾ ಮುಂಬೈನ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಳು. ಕ್ರೈಮ್ ಪೆಟ್ರೋಲ್ ಧಾರಾವಾಹಿಯ ಹಲವಾರು ಸಂಚಿಕೆಗಳಲ್ಲಿ ನಟಿಸಿದ್ದಳು. ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರೇಕ್ಷಾ ತವರಿಗೆ ಬಂದಿದ್ದಳಂತೆ.

ಪ್ರೇಕ್ಷಾ ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾಳೆ. ಕೆಲವು ನಾಟಕಗಳಲ್ಲಿ ನಟಿಸಿದ್ದಾಳೆ. ರಾಷ್ಟ್ರೀಯ ನಾಟಕ ಉತ್ಸವದಲ್ಲಿ ಪಾಲ್ಗೊಂಡಿದ್ದ ನಟಿಗೆ ಪ್ರಶಸ್ತಿ ಸಿಕ್ಕಿತ್ತು. ಸಾಯಲು ಸ್ವಲ್ಪ ಸಮಯದ ಮೊದಲು ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪ್ರೇಕ್ಷಾ ಕನಸುಗಳನ್ನು ಸಾಯಿಸುವುದು ತುಂಬಾ ಕೆಟ್ಟದ್ದು ಎನ್ನವ ಅರ್ಥದ ಸ್ಟೇಟಸ್ ಹಾಕಿದ್ದಳು.

- Advertisement -

Latest News

error: Content is protected !!