Saturday, June 6, 2026
HomeWorldಉಗ್ರ ಯಾಸಿನ್ ಪರ ಶಾಹಿದ್ ಅಫ್ರಿದಿ ಬ್ಯಾಟಿಂಗ್; ಪಾಕಿಸ್ತಾನದ ಮಾಜಿ ಆಟಗಾರನ ಟ್ವೀಟ್ ವಾರ್ 

ಉಗ್ರ ಯಾಸಿನ್ ಪರ ಶಾಹಿದ್ ಅಫ್ರಿದಿ ಬ್ಯಾಟಿಂಗ್; ಪಾಕಿಸ್ತಾನದ ಮಾಜಿ ಆಟಗಾರನ ಟ್ವೀಟ್ ವಾರ್ 

- Advertisement -
- Advertisement -

ಇಸ್ಮಾಮಾಬಾದ್: ಭಾರತವನ್ನು ವಿರೋಧಿಸಿ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಡಿಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಶ್ಮೀರದ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಪರ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಆಟಗಾರ ಶಾಹಿದ್ ಅಫ್ರಿದಿ ಬ್ಯಾಟಿಂಗ್ ನಡೆಸಿದ್ದಾರೆ.

ಶಾಹಿದ್ ಅಫ್ರಿದಿ ಈ ವಿಚಾರದ ಕುರಿತು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದು, ಮಾನವ ಹಕ್ಕುಗಳ ದುರುಪಯೋಗದ ವಿರುದ್ಧ ವಿಮರ್ಶಾತ್ಮಕ ಧ್ವನಿಗಳನ್ನು ಮೌನಗೊಳಿಸಲು ಭಾರತದ ನಿರಂತರ ಪಯತ್ನಗಳು ನಿಷ್ಟ್ರಯೋಜಕವಾಗಿದೆ. ಯಾಸಿನ್ ಮಲಿಕ್ ವಿರುದ್ಧದ ಆರೋಪಗಳು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಕ್ಕೆ ಅಡ್ಡಿಯಾಗದಿರಲಿ. ಕಾಶ್ಮೀರ ನಾಯಕರ ವಿರುದ್ಧ ಅನ್ಯಾಯ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ನಿಗಾ ಇಡುವಂತೆ ಯುಎನ್ (ವಿಶ್ವಸಂಸ್ಥೆ)ಗೆ ಒತ್ತಾಯಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!