Thursday, June 4, 2026
Homeಕರಾವಳಿಮಂಗಳೂರುಉಳ್ಳಾಲ: ರೇಬೀಸ್ ಸೋಂಕು ಶಂಕೆ; ಏಕಾಏಕಿ ಹಲವರ ಮೇಲೆ ದಾಂಧಲೆ ನಡೆಸಿ ಮೃತಪಟ್ಟ ಹಸು

ಉಳ್ಳಾಲ: ರೇಬೀಸ್ ಸೋಂಕು ಶಂಕೆ; ಏಕಾಏಕಿ ಹಲವರ ಮೇಲೆ ದಾಂಧಲೆ ನಡೆಸಿ ಮೃತಪಟ್ಟ ಹಸು

- Advertisement -
- Advertisement -

ಉಳ್ಳಾಲ: ಹಸುವೊಂದು ಏಕಾಏಕಿ ಹಲವರ ಮೇಲೆ ದಾಳಿ ನಡೆಸಿ ಸಾವಿಗೀಡಾದ ಘಟನೆ ಉಳ್ಳಾಲ ತಾಲೂಕಿನ ಸೋಮೇಶ್ವರ ಬಳಿ ಸಂಭವಿಸಿದೆ.

ಸೋಮೇಶ್ವರದ ನಿವಾಸಿಯೊಬ್ಬರಿಗೆ ಸೇರಿದ್ದ ಹಸು ಮನೆಯೊಂದರ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಟರ್ ಮತ್ತು ಮಹಿಳೆ ಸೇರಿದಂತೆ ಹಲವರ ಮೇಲೆ ಎರಗಿದೆ.

ನಂತರ ಸ್ಥಳೀಯರು ಹರಸಾಹಸ ಪಟ್ಟು ಹಸುವನ್ನು ಹಿಡಿದಿದ್ದು, ಪಶುವೈದ್ಯರು ಅರವಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಹಸು ಮೃತಪಟ್ಟಿದೆ.

ಹುಚ್ಚು ನಾಯಿ ಕಡಿತದಿಂದಾಗಿ ರೇಬೀಸ್ ಸೋಂಕಿನಿಂದ ಹಸು ದಾಂಧಲೆ ನಡೆಸಿ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದ್ದು, ಅಧಿಕೃತವಾಗಿ ಧೃಢೀಕರಿಸಲು ಹಸುವಿನ ಮೆದುಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಪಶುವೈದ್ಯರು ನಿರ್ಧರಿಸಿದ್ದಾರೆ.

- Advertisement -

Latest News

error: Content is protected !!