Friday, May 17, 2024
Homeತಾಜಾ ಸುದ್ದಿಕೋವಿಶಿಲ್ಡ್ vs ಕೋವ್ಯಾಕ್ಸಿನ್: ವರದಿ ಪ್ರಕಾರ ಯಾವ ಲಸಿಕೆ ಉತ್ತಮ ?

ಕೋವಿಶಿಲ್ಡ್ vs ಕೋವ್ಯಾಕ್ಸಿನ್: ವರದಿ ಪ್ರಕಾರ ಯಾವ ಲಸಿಕೆ ಉತ್ತಮ ?

spot_img
- Advertisement -
- Advertisement -

ನವದೆಹಲಿ: ದೇಶೀಯವಾಗಿಯೇ ಅಭಿವೃದ್ಧಿಪಡಿಸಿ, ಉತ್ಪಾದಿಸಲಾಗುತ್ತಿರುವ ಕೊರೋನಾ ಲಸಿಕೆಗಳಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಪೈಕಿ ಯಾವುದು ಹೆಚ್ಚು ಪರಿಣಾಮಕಾರಿ? ಎರಡೂ ಲಸಿಕೆಗಳು 2 ಡೋಸ್‌ ಪಡೆದ ಬಳಿಕ ಕೊರೋನಾ ವೈರಸ್‌ ವಿರುದ್ಧ ಉತ್ತಮ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಿರುವುದು ಕಂಡುಬಂದಿದೆ ಎಂದು ಲಸಿಕೆಗಳ ಪರಿಣಾಮ ಕುರಿತು ನಡೆಸಿದ ಪ್ರಾಥಮಿಕ ಅಧ್ಯಯನವೊಂದು ತಿಳಿಸಿದೆ.

ಆದರೆ ಎರಡೂ ಲಸಿಕೆಗಳನ್ನು ಪರಸ್ಪರ ಹೋಲಿಸಿ ನೋಡಿದಾಗ, ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ಗಿಂತ, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಪಡೆದವರಲ್ಲಿ ಹೆಚ್ಚಿನ ಸೆರೋಪಾಸಿಟಿವಿಟಿ ರೇಟ್‌ (ಪರೀಕ್ಷೆಗೆ ಒಳಗಾದವರಲ್ಲಿ ಪತ್ತೆಯಾದ ರೋಗನಿರೋಧಕ ಶಕ್ತಿ ಪ್ರಮಾಣ) ಮತ್ತು ಆ್ಯಂಟಿ ಸ್ಪೈಕ್‌ ಆ್ಯಂಟಿಬಾಡಿ (ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳ ಸಂಖ್ಯೆ) ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ‘ಕೋವ್ಯಾಟ್‌’ (ಕೊರೋನಾ ವೈರಸ್‌ ವ್ಯಾಕ್ಸಿನ್‌ ಇನ್‌ಡ್ಯೂಸ್ಡ್‌ ಆ್ಯಂಟಿಬಾಡಿ ಟಿಟ್ರೆ) ನಡೆಸಿದ ಅಧ್ಯಯನ ವರದಿ ತಿಳಿಸಿದೆ.

ವರದಿಯಲ್ಲೇನಿದೆ?

  • 2 ಡೋಸ್‌ ಪಡೆದ ಬಳಿಕ ಎರಡೂ ಲಸಿಕೆಗಳಿಂದ ಉತ್ತಮ ರೋಗನಿರೋಧಕ ಶಕ್ತಿ ಅಭಿವೃದ್ಧಿ
  • ಕೋವಿಶೀಲ್ಡ್‌ ಪಡೆದವರಲ್ಲಿ ಆ್ಯಂಟಿಬಾಡಿ ಪ್ರಮಾಣ 127, ಕೋವ್ಯಾಕ್ಸಿನ್‌ ಪಡೆದವರಲ್ಲಿ 53 ಯುನಿಟ್‌
  • ಕೋವಿಶೀಲ್ಡ್‌ ಪಡೆದವರಲ್ಲಿ ಸೋಂಕು ತಗಲಿದ ಪ್ರಮಾಣ 5.5%, ಕೋವ್ಯಾಕ್ಸಿನ್‌ ಪಡೆದವರಲ್ಲಿ 2.2%
  • ಈ ವರದಿ ತಜ್ಞರಿಂದ ಪರಿಶೀಲನೆಗೆ ಒಳಪಟ್ಟಿಲ್ಲ, ಹೀಗಾಗಿ ಕ್ಲಿನಿಕಲ್‌ ಪ್ರಾಕ್ಟೀಸ್‌ಗೆ ಮಾರ್ಗಸೂಚಿ ಅಲ್ಲ

- Advertisement -
spot_img

Latest News

error: Content is protected !!