Monday, May 20, 2024
Homeಕರಾವಳಿಸರ್ಕಾರಕ್ಕೆ ಅನ್ ಲಾಕ್ ಚಿಂತೆ: ದ.ಕ ಜಿಲ್ಲಾಡಳಿತಕ್ಕೆ ಕರೋನಾ ನಿಯಂತ್ರಣವೇ ಸವಾಲು..!

ಸರ್ಕಾರಕ್ಕೆ ಅನ್ ಲಾಕ್ ಚಿಂತೆ: ದ.ಕ ಜಿಲ್ಲಾಡಳಿತಕ್ಕೆ ಕರೋನಾ ನಿಯಂತ್ರಣವೇ ಸವಾಲು..!

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ( ಜೂನ್ 8 ರಿಂದ ) ಕಠಿಣ ಲಾಕ್ ಡೌನ್ ಗೆ ಜಿಲ್ಲಾಧಿಕಾರಿ ಆದೇಶ ನೀಡಿದ ಬೆನ್ನಲ್ಲೇ ಪೊಲೀಸ್ ಚೆಕ್ ಪೋಸ್ಟ್ ಗಳಲ್ಲಿ ಕಠಿಣ ವಾಹನ ತಪಾಸಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೂಡ ವಾಹನ ತಪಾಸಣೆ ಕೂಡ ಜೋರಾಗಿದೆ. ಮಂಗಳೂರು ನಗರ ಭಾಗದಲ್ಲಿ ಕರೋನಾ ಸೋಂಕಿನ ಪ್ರಮಾಣ ಕಡಿಮೆ ಆದರೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಕರೋನಾ ಸಂಖ್ಯೆ ಉಲ್ಬಣ ಆಗುತ್ತಿದೆ. ಜಿಲ್ಲೆಯ 17 ಗ್ರಾಮದಲ್ಲಿ ಕರೋನಾ ಪ್ರಕರಣ ಹೆಚ್ಚಿದ ಹಿನ್ನಲೆಯಲ್ಲಿ ಟಫ್ ರೂಲ್ಸ್ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇನ್ನೂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕರೋನಾ ಹೆಚ್ಚಾದ ಹಿನ್ನೆಲೆ ಅಲ್ಲಿ ಕೂಡ ಸೀಲ್ ಡೌನ್ ಜಿಲ್ಲಾಡಳಿತ ಆದೇಶ ನೀಡಿದೆ. ರಾಜ್ಯ ಸರ್ಕಾರಕ್ಕೆ ಅನ್ ಲಾಕ್ ಚಿಂತೆ ಆಗಿದ್ದರೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಒಂದು ವಾರದಲ್ಲಿ ಕರೋನಾ ರೇಟ್ 5% ಆಗಬೇಕೆಂಬ ಸವಾಲು ಎದುರಾಗಿದೆ. ಈ ಹಿನ್ನಲೆಯಲ್ಲಿ ಒಂದು ಲಾಕ್ ಡೌನ್ ನಿಯಮ ಕಠಿಣ ಗೊಳಿಸಿ ಜಿಲ್ಲಾಡಳಿತ ಸೂಚನೆ ನೀಡಿದೆ.

- Advertisement -
spot_img

Latest News

error: Content is protected !!