Thursday, May 2, 2024
Homeತಾಜಾ ಸುದ್ದಿಹಣಕಾಸು ವಂಚನೆ ಆರೋಪ : ಗಾಂಧಿ ಮರಿ ಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ

ಹಣಕಾಸು ವಂಚನೆ ಆರೋಪ : ಗಾಂಧಿ ಮರಿ ಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ

spot_img
- Advertisement -
- Advertisement -

ದಕ್ಷಿಣ ಆಫ್ರಿಕಾ: ನಕಲಿ ದಾಖಲೆ ಸೃಷ್ಟಿ, ಹಣಕಾಸು ವಂಚನೆ ಆರೋಪದಲ್ಲಿ ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್​ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಉದ್ಯಮಿಯೊಬ್ಬರಿಗೆ 6.2 ಮಿಲಿಯನ್ ರಾಂಡ್ (3.22 ಕೋಟಿ ರೂಪಾಯಿ) ವಂಚನೆ ಪ್ರಕರಣದಲ್ಲಿ ಗಾಂಧೀಜಿಯವರ ಮರಿಮೊಮ್ಮಗಳು ಆಶಿಶ್‌ ಲತಾ ರಾಮ್​ಗೋಬಿನ್ ಅವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಇಳಾ ಗಾಂಧಿ ಹಾಗೂ ಮೆವಾ ರಾಮ್​ಗೋವಿಂದ್ ಅವರ ಮಗಳಾದ ಆಶಿಶ್ ಲತಾ ವಿರುದ್ಧ ವಂಚನೆ ಪ್ರಕರಣ 2015ರಲ್ಲಿ ದಾಖಲಾಗಿದ್ದು, ಉದ್ಯಮಿ ಎಸ್.ಆರ್.ಮಹಾರಾಜ್​ ಎನ್ನುವವರಿಂದ 6.2 ಮಿಲಿಯನ್ ರಾಂಡ್ ಪಡೆದು ನಂತರ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆಶಿಶ್‌ ಲತಾ ಅವರು ತೋರಿಸಿದ್ದ ದಾಖಲೆಗಳೆಲ್ಲವೂ ನಕಲಿ ಎನ್ನುವುದು ತಿಳಿದುಬಂದಿದ್ದು, ಅವರನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪಿನಲ್ಲಿ ಪ್ರಕಟಿಸಿದೆ.

ದಕ್ಷಿಣ ಆಫ್ರಿಕಾದ ನೆಟ್​ಕೇರ್​ ಎಂಬ ಸಂಸ್ಥೆಯೊಂದಿಗೆ ಕೆಲ ವ್ಯವಹಾರಗಳಿವೆ. ಆ ಸಂಸ್ಥೆಗಾಗಿ 3 ಕಂಟೈನರ್​ ಲೆನಿನ್ ಬಟ್ಟೆಗಳನ್ನು ತರಿಸಿದ್ದೇನೆ. ಆದರೆ, ಆರ್ಥಿಕವಾಗಿ ಕೆಲ ಕಷ್ಟಗಳು ಎದುರಾಗಿರುವುದರಿಂದ ವಸ್ತುಗಳನ್ನು ಇಳಿಸಿಕೊಳ್ಳಲು ಹಣದ ಸಹಾಯ ಬೇಕು. ತುರ್ತಾಗಿ 6.2ಮಿಲಿಯನ್​ ರಾಂಡ್ ಬೇಕಿದ್ದು, ನಿಮಗೆ ಸೂಕ್ತ ಮೊತ್ತದೊಂದಿಗೆ ಅದನ್ನು ಹಿಂತಿರುಗಿಸಲಾಗುವುದು ಎಂದು ಉದ್ಯಮಿ​ ಬಳಿ ಭರವಸೆ ವ್ಯಕ್ತಪಡಿಸಿ ನೆಟ್​ಕೇರ್ ಸಂಸ್ಥೆಯ ದಾಖಲೆಗಳನ್ನು ತೋರಿಸಿದ್ದರು.

ಆಶಿಶ್​ ಲತಾ ಅವರ ಕೌಟುಂಬಿಕ ಹಿನ್ನೆಲೆ ಹಾಗೂ ನೆಟ್​ಕೇರ್​ ದಾಖಲೆಗಳನ್ನು ಗಮನಿಸಿದ ಉದ್ಯಮಿ​ ಸಹಾಯಕ್ಕೆ ಒಪ್ಪಿ, ಲಿಖಿತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಸಾಲ ನೀಡಿದ್ದರು. ಆದರೆ, ನಂತರದಲ್ಲಿ ಆಶಿಶ್​ ಲತಾ ಅವರಿಗೂ ನೆಟ್​ಕೇರ್ ಸಂಸ್ಥೆಗೂ ಯಾವುದೇ ವ್ಯವಹಾರಗಳಿಲ್ಲ. ಅವರು ತೋರಿಸಿದ ದಾಖಲೆಗಳು ನಕಲಿ ಎನ್ನುವ ವಿಚಾರ ಬಹಿರಂಗವಾಗಿತ್ತು. ಅದಾದ ಬೆನ್ನಲ್ಲೇ ಉದ್ಯಮಿ ಕಾನೂನಿನ ಮೊರೆ ಹೋಗಿ ಗಾಂಧಿ ಮರಿಮೊಮ್ಮಗಳ ವಿರುದ್ಧ ದೂರು ದಾಖಲಿಸಿದ್ದರು.

- Advertisement -
spot_img

Latest News

error: Content is protected !!