Thursday, June 4, 2026
HomeUncategorizedಕೊರೊನಾ, ಬ್ಲ್ಯಾಕ್ ಫಂಗಸ್ ನಡುವೆ ಶುರುವಾಯಿತು ಹೊಸ ಆತಂಕ: ಶಿವಮೊಗ್ಗದಲ್ಲಿ ಕವಾಸಕಿ ರೋಗಕ್ಕೆ ನಾಲ್ವರು ಮಕ್ಕಳು...

ಕೊರೊನಾ, ಬ್ಲ್ಯಾಕ್ ಫಂಗಸ್ ನಡುವೆ ಶುರುವಾಯಿತು ಹೊಸ ಆತಂಕ: ಶಿವಮೊಗ್ಗದಲ್ಲಿ ಕವಾಸಕಿ ರೋಗಕ್ಕೆ ನಾಲ್ವರು ಮಕ್ಕಳು ಬಲಿ

- Advertisement -
- Advertisement -

ಶಿವಮೊಗ್ಗ : ರಾಜ್ಯದಲ್ಲಿ  ಕೊರೊನಾ ವೈರಸ್, ಬ್ಲ್ಯಾಕ್ ಫಂಗಸ್ ಆತಂಕದ ನಡುವೆ  ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ, ಅಪೌಷ್ಠಿಕತೆ ಸಮಸ್ಯೆ ಇರುವ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಳ್ಳುತ್ತಿದೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಳ್ಳುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ 8 ಮಕ್ಕಳಲ್ಲಿ ರೋಗ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಬೇರೆ ಬೇರೆ ಆರೋಗ್ಯ ಸಮಸ್ಯೆ ಹೊಂದಿರುವ 8 ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಾಲ್ಕೈದು ವಾರಗಳ ಬಳಿಕ ಕವಾಸಕಿ ರೋಗ ಕಾಣಿಸಿಕೊಳ್ಳುತ್ತಿದ್ದು, ಇದು ಹಳೆಯ ರೋಗ ಆದರೂ ಕೊರೊನಾ ಸೋಂಕು ಹೆಚ್ಚಿರುವ ಸಮಯದಲ್ಲಿ ಕಾಣಿಸಿಕೊಂಡ ಆತಂಕ ಮೂಡಿಸಿದೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ.

- Advertisement -

Latest News

error: Content is protected !!