ಕೋವಿಡ್-19ರ 1,151 ಪ್ರಕರಣಗಳು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಪತ್ತೆಯಾಗಿದೆ. ಯಾವುದೇ ಸಾವು ದಾಖಲಾಗಿಲ್ಲ. ಈ ವರೆಗೆ ಸೋಂಕಿನಿಂದ ಬಲಿಯಾದವರು 40,089 ಮಂದಿ. ಸಕ್ರಿಯ ಪ್ರಕರಣಗಳ ಸಂಖ್ಯೆ 7,617ಕ್ಕೆ ಏರಿಕೆಯಾಗಿದೆ.
ಕೊರೊನಾದಿಂದ ಗುಣಮುಖರಾದವರು ಸಂಖ್ಯೆ 1,214 ಆಗಿದ್ದು, ದೈನಂದಿನ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.53.ದೇಶದಲ್ಲಿ ಕಳೆದೊಂದು ದಿನದಲ್ಲಿ ಪತ್ತೆಯಾದ ಕೋವಿಡ್-19ರ ಪ್ರಕರಣಗಳ ಸಂಖ್ಯೆ 20,557. ಕೊರೊನಾಗೆ ಬಲಿಯಾದವರು 40 ಮಂದಿ. ಈ ವರೆಗೆ ಸೋಂಕಿನಿಂದ ಪ್ರಾಣ ಕಳೆದುಕೊಂಡವರು ಒಟ್ಟು 5,25,825. ಸಕ್ರಿಯ ಪ್ರಕರಣಗಳ ಸಂಖ್ಯೆ 1,45,654ಕ್ಕೆ ಏರಿಕೆಯಾಗಿದೆ.
ಇನ್ನು ಸೋಂಕಿನಿಂದ 18,517 ಮಂದಿ ಗುಣಮುಖರಾಗಿದ್ದಾರೆ. ದೈನಂದಿನ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.7ರಷ್ಟು. ತಗ್ಗಿರುವ ಸಕ್ರಿಯ ಸೋಂಕಿನ ಪ್ರಕರಣಗಳ ಪ್ರಮಾಣ ಶೇಕಡ 0.33.ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 6,65,557. ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 1,254 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,24,55,196. ಕೋವಿಡ್-19ರ ಸೋಂಕಿನಿಂದ ಹೊರಬಂದವರು 9,58,600. ಭಾರತ ಸೇರಿದಂತೆ ಅಮೆರಿಕ, ಬ್ರೆಜಿಲ್, ಪ್ರಾನ್ಸ್, ಜರ್ಮನಿಗಳಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದೆ ಎಂದು ತಿಳಿದು ಬಂದಿದೆ.


